

ಆಲ್ ಕೇರಳ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಮತ್ತು ವೆಲ್‌ಫೇರ್ ಅಸೋಸಿಯೇಷನ್, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿ ಸಹಾಯ ಮಾಡುತ್ತಿರುವ ಚಿತ್ರವನ್ನು ಇಂದು ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯಾಷನಲ್ ಕ್ರಶ್, ಕೊಡಗಿನ ಬೆಡಗಿ, ಬಹುಭಾಷಾ ಚಿತ್ರರಂಗದ ಬಹು ಬೇಡಿಕೆ ನಟಿ ರಶ್ಮಿಕಾ ಮಂದಣ್ಣ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರ ಅಭಿಮಾನಿಗಳು ಕೇವಲ ಚಲನಚಿತ್ರಗಳನ್ನು ವೀಕ್ಷಿಸುವುದಲ್ಲದೇ, ನಟಿಯ ಹೆಸರಿನಲ್ಲಿ ಸಮಾಜ ಸೇವೆ ಕೂಡ ಮಾಡುತ್ತಾರೆ. ಕೇರಳದಲ್ಲಿ ರಶ್ಮಿಕಾ ಮಂದಣ್ಣ ಅಭಿಮಾನಿಗಳ ಸಂಘವು ಇತ್ತೀಚೆಗೆ ತಮ್ಮ ಸಮಾಜ ಸೇವೆ ಮೂಲಕ ನಟಿಯನ್ನು ಸಂತೋಷಪಡಿಸಿದೆ. ಅವರನ್ನು ಹೆಮ್ಮೆ ಪಡುವಂತೆ ಮಾಡಿದೆ.
ಆಲ್ ಕೇರಳ ರಶ್ಮಿಕಾ ಮಂದಣ್ಣ ಅಭಿಮಾನಿಗಳು ಮತ್ತು ವೆಲ್‌ಫೇರ್ ಅಸೋಸಿಯೇಷನ್, ಅಗತ್ಯವಿರುವ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ನೀಡಿ ಸಹಾಯ ಮಾಡುತ್ತಿರುವ ಚಿತ್ರವನ್ನು ಇಂದು ನಟಿ ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರವನ್ನು ಹಂಚಿಕೊಂಡಿರುವ ರಶ್ಮಿಕಾ, 'ಇದು ನನ್ನ ಹೃದಯವನ್ನು ತುಂಬಾ ಸಂತೋಷಪಡಿಸಿದೆ' ಎಂದು ಬರೆದು ಹೃದಯದ ಇಮೋಜಿಯನ್ನು ಹಾಕಿದ್ದಾರೆ. ಜೊತೆಗೆ ತಮ್ಮ ಅಭಿಮಾನಿಗಳ ಸಂಘ ಹಂಚಿಕೊಂಡ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ರಶ್ಮಿಕಾ 'ನೀವು ಉತ್ತಮವಾದದ್ದಕ್ಕೆ ಮಾತ್ರ ಅರ್ಹರು' ಎಂದಿದ್ದಾರೆ.