'ಅವನ್ಯಾವ ಸೀಮೆ ಅಪ್ಪ?' ಮಗಳು ಭಯೋತ್ಪಾದಕಿ ಎಂದಿದ್ದಕ್ಕೆ ಅಪ್ಪನಿಗೆ ತಿರುಗೇಟು ಕೊಟ್ಟ ಹೋರಾಟಗಾರ್ತಿ ಮಗಳು

shaila
Published on

ನವದೆಹಲಿ: ನನ್ನ ಮಗಳು ಒಬ್ಬ ಭಯೋತ್ಪಾದಕಿ. ಮನೆಯಲ್ಲೇ ಭಯೋತ್ಪಾದನೆಯ ಕೆಲಸ ಮಾಡುತ್ತಿದ್ದಳು ಎಂದು ಜೆಎನ್​ಯು ಶೈಲಾ ರಷೀದ್‌ ತಂದೆ ಅಬ್ದುಲ್‌ ರಷೀದ್‌ ಆರೋಪ ಮಾಡಿರುವ ಬೆನ್ನಲ್ಲೇ, ಮಗಳು ತಂದೆಯ ವಿರುದ್ಧ ಆರೋಪದ ಸುರಿಮಳೆ ಸುರಿಸಿದ್ದಾರೆ.

ನಾನು, ನನ್ನ ಸಹೋದರಿ ಇಬ್ಬರೂ ಅಮ್ಮನನ್ನೇ ಅಪ್ಪ ಅಂದುಕೊಂಡು ಬೆಳೆದಿದ್ದೇವೆ. ಆತ ಯಾವತ್ತಿಗೂ ನಮಗೆ ತಂದೆಯ ರೀತಿಯಲ್ಲಿ ಕಾಣಿಸಿಕೊಂಡೇ ಇಲ್ಲ. ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನಮ್ಮ ಆತನ ಮಧ್ಯೆ ತಂದೆ ಮಗಳ ಸಂಬಂಧ ಇಲ್ಲವೇ ಇಲ್ಲ ಎಂದು ಶೈಲಾ ರಷೀದ್​ ಹೇಳಿದ್ದಾರೆ.

ತಂದೆ ಎಂದು ಈಗ ದೂರು ಮಾಡಿರುವ ಆತನಿಗೆ ನಾನು ಯಾವಾಗ ಯಾವ ತರಗತಿಯಲ್ಲಿ ಓದುತ್ತಿದ್ದೆ ಎನ್ನುವುದೇ ಗೊತ್ತಿಲ್ಲ. 2017ರಲ್ಲಿ ಸೋಶಿಯಾಲಜಿ ಪಿಎಚ್​ಡಿ ಕೊನೆಯ ಸೆಮಿಸ್ಟರ್​ನಲ್ಲಿದ್ದೆ ಎಂದು ದೂರಿನಲ್ಲಿ ಬರೆದಿದ್ದಾನೆ. ಆದರೆ ಗೂಗಲ್​ ಸರ್ಚ್​ ಮಾಡಿದರೆ ನನ್ನ ವಿದ್ಯಾಭ್ಯಾಸದ ಸರಿಯಾದ ಮಾಹಿತಿ ಸಿಗುತ್ತದೆ. ನನ್ನ ಎನ್​ಜಿಒಗಳ ಮೇಲೆ ತನಿಖೆಯಾಗಬೇಕು ಎಂದು ಹೇಳಿದ್ದಾನೆ. ನಾನು ಯಾವುದೇ ಎನ್​ಜಿಒ ಹೊಂದಿಲ್ಲ. ಆದರೆ ಆತ ನನಗೆ 3 ಎನ್​ಜಿಒ ಇರುವುದಾಗಿ ತಿಳಿಸಿದ್ದಾನೆ. ನನ್ನನ್ನು ಗೌಪ್ಯವಾಗಿ ತನಿಖೆ ಮಾಡಿದರೂ ಯಾವುದೇ ಎನ್​ಜಿಒ ಜತೆಗೆ ನನಗೆ ಸಂಪರ್ಕ ಇಲ್ಲ ಎಂದೇ ತಿಳಿಯುತ್ತದೆ ಎಂದು ಆಕೆ ಹೇಳಿದ್ದಾರೆ.

ಆತ ಅಪ್ಪನಾಗಿ ಮಾಡಿದ್ದೇನು ಇಲ್ಲ. ನನ್ನ ಅಮ್ಮನಿಗೆ ಯಾವಾಗಲೂ ಹಿಂಸೆ ಕೊಡುತ್ತಿದ್ದ. ಆಕೆಗೆ ದೈಹಿಕ ಹಲ್ಲೆ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ನನ್ನ ಅಮ್ಮ 32 ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡಿ ನನ್ನನ್ನು ಮತ್ತು ನನ್ನ ಸಹೋದರಿಯನ್ನು ಸಾಕಿದ್ದಾರೆ. ಅವರ ಬೆವರಿನ ಫಲವಾಗಿ ನಾವು ಇಂದು ಹೀಗಿದ್ದೇವೆ ಎಂದು ಶೈಲಾ ನುಡಿದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net