ಇಲ್ನೋಡಿ ಬಲು ಅಪರೂಪದ ಬಿಳಿ ಹೆಬ್ಬಾವು ಸಿಕ್ಕಿದೆ!

white python
Published on

ಬಂಟ್ವಾಳ: ತಾಲೂಕಿನ ಕಾವಳಕಟ್ಟೆಯ ನೌಶಾದ್​ ಮನೆ ಬಳಿ ಅಪರೂಪದ ಬಿಳಿ ಹೆಬ್ಬಾವು ಪತ್ತೆಯಾಗಿದೆ.

ಸಾಮಾನ್ಯವಾಗಿ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ. ಉಳಿದ ಹಾವುಗಳು ಬಣ್ಣದ ಆಕರ್ಷಣೆಗೊಳಗಾಗಿ ಇದನ್ನು ತಿಂದು ಬಿಡುತ್ತವೆ. ಈ ಹಾವು ಇಷ್ಟು ದೊಡ್ಡದಾಗಿ ಬೆಳೆದಿರುವುದು ವಿಶೇಷ ಎಂದು ಉರಗ ಪ್ರೇಮಿ ಸ್ನೇಕ್​ ಕಿರಣ್​ ಹೇಳಿದ್ದಾರೆ.

ಸ್ನೇಕ್​ ಕಿರಣ್​ ಹಾವನ್ನು ರಕ್ಷಿಸಿದ್ದು, ವಲಯ ಅರಣ್ಯಾಧಿಕಾರಿ ಶ್ರೀಧರ್​ ನಿರ್ದೇಶನದಂತೆ ಪಿಲಿಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಯಿತು.

ಬಿಳಿ ಹಾವುಗಳು ಅಪರೂಪವಾಗಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿರುವುದು ಎರಡನೇಯದ್ದು. ಚರ್ಮದ ವರ್ಣದ್ರವ್ಯದ ಕೊರತೆಯಿಂದ ಹುಟ್ಟುವ ಈ ಜೀವಿಗಳಿಗೆ ಆಲ್ಬಿನೋ ಎಂದು ಕರೆಯುವುದಾಗಿ ಸ್ನೇಕ್​ ಕಿರಣ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net