

ವಿಶಾಖಪಟ್ಟಣಂ: (crabs ) ನೀವು ಕಡಲತೀರಕ್ಕೆ ಹೋದಾಗ, ಏಡಿಗಳು ಓಡಾಡುತ್ತಾ ಮರಳಿನೊಳಗೆ ಹೋಗುವುದನ್ನು ನೀವು ನೋಡುತ್ತೀರಿ. ಏಡಿಗಳಲ್ಲಿ ಹಲವು ವಿಧಗಳಿವೆ. ಕೆಲವು ಸಿಹಿನೀರಿನ ಏಡಿಗಳು, ಇನ್ನು ಕೆಲವು ಉಪ್ಪುನೀರಿನ ಏಡಿಗಳು. ಕರಾವಳಿ ಪ್ರದೇಶಗಳಲ್ಲಿಯೂ ವಿವಿಧ ರೀತಿಯ ಏಡಿಗಳು ಕಂಡುಬರುತ್ತವೆ. ವಿಶಾಖಪಟ್ಟಣಂನ ವೈಜಾಗ್ ಬೀಚ್ನಲ್ಲಿ ಸ್ಪೆಷಲ್ ಏಡಿಗಳು ಪತ್ತೆಯಾಗಿವೆ.
ನಾವು ಅವುಗಳನ್ನು ಸಾಮಾನ್ಯವಾಗಿ ನೀರಿನಲ್ಲಿ, ದಡದಲ್ಲಿ ಮತ್ತು ಮರಳಿನ ದಿಬ್ಬಗಳಲ್ಲಿ ನೋಡುತ್ತೇವೆ. ಆದರೆ ವಿಶಾಖಪಟ್ಟಣಂನ ಸಾಗರ್ ನಗರದ ಕರಾವಳಿಯಲ್ಲಿ ಹಳದಿ ಏಡಿಗಳು ಕಾಣಿಸಿಕೊಂಡಿವೆ.
ಬಿಲಗಳಲ್ಲಿ ಅಥವಾ ಸಮುದ್ರದಲ್ಲಿ ಮಾತ್ರ ವಾಸಿಸುತ್ತವೆ. ಕರಾವಳಿ ಭಾಗದಲ್ಲಿ ಪತ್ತೆಯಾದರೂ, ಇವುಗಳ ಸಂಖ್ಯೆ ತುಂಬಾ ವಿರಳ. ಈ ಏಡಿಗಳು ಮನುಷ್ಯರನ್ನು ನೋಡಿದಾಗ ತಮ್ಮ ಬಿಲಗಳಿಗೆ ತೆವಳುತ್ತವೆ. ದಿನವಿಡಿ ಸಮುದ್ರದಲ್ಲೂ ಕೂತರೂ, ಕತ್ತಲಾದರೂ ಮನುಷ್ಯರಿಗೆ ಕಾಣದಂತೆ ತಮ್ಮ ಬಿಲಗಳಲ್ಲಿ ಅಡಗಿಕೊಳ್ಳುತ್ತವೆ ಎಂದು ಮೀನುಗಾರರು ತಿಳಿಸಿದ್ದಾರೆ.
ಈ ಏಡಿಗಳು ತುಂಬಾ ಬುದ್ಧವಂತವಾಗಿದ್ದು ಮೀನಿಗೆ ಬೀಸಿದ ಬೆಲೆಗಳಲ್ಲಿ ಯಾವತ್ತೂ ಸಿಕ್ಕಿಕೊಳ್ಳುವುದಿಲ್ಲ. ತಿನ್ನಲು ತುಂಬಾ ರುಚಿಯಾಗಿರುತ್ತವೆ ಎನ್ನಲಾಗಿದೆ.
ಇದರ ವೈಜ್ಞಾನಿಕ ಹೆಸರು ಓಸಿಪೋಡ್ ಕ್ವಾಡ್ರಾಟಾ (Ocypode Crabs). ಇವುಗಳನ್ನು ಗೋಸ್ಟ್ ಕ್ರ್ಯಾಬ್ಸ್ ಅಂತಲೂ ಕರೆಯುತ್ತಾರೆ. ಈ ಏಡಿಗಳು ಉಷ್ಣವಲಯದ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ವಾಸಿಸುತ್ತವೆ. ನೇರವಾಗಿ ಕಾಣುವ ಅವುಗಳ ಕಣ್ಣುಗಳು 360 ಡಿಗ್ರಿಗಳಷ್ಟು ತಿರುಗುತ್ತವೆ. ಪುಟ್ಟ ಏಡಿಗಳು ಮರಳಿನೊಳಗೆ ಆವಾಸಸ್ಥಾನ ಮಾಡಿಕೊಂಡಿರುತ್ತವೆ.