ಕಲ್ಕಿ 2898 AD ವೀಕ್ಷಿಸಿದ ದೀಪ್ವೀರ್ ದಂಪತಿ; ಸಿನಿಮಾ ಬಗ್ಗೆ ರಣವೀರ್​ ಸಿಂಗ್​​ ಹೇಳಿದ್ದೇನು ಗೊತ್ತಾ?

Untitled-design-2024-07-03T161840.928-1
Published on

ಮುಂಬೈ: ನಾಗ್ ಅಶ್ವಿನ್​​ ನಿರ್ದೇಶನದ ಸಿನಿಮಾ ಕಲ್ಕಿ 2898 AD ಜೂನ್​ 27ರಂದು ರಿಲೀಸ್​ ಆಗಿದೆ. ಬಿಡುಗಡೆಯಾದಗಿನಿಂದಲೂ ಬಾಕ್ಸ್​ ಆಫೀಸ್​​ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಮುಂತಾದ ತಾರೆಯರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಮಧ್ಯೆ ಸಿನಿಮಾ ವೀಕ್ಷಿಸಲು ಕುಟುಂಬಸ್ಥರೊಂದಿಗೆ ಬಂದಿದ್ದ ನಟಿ ದೀಪಿಕಾ ಪಡುಕೋಣೆ ಮುಂಬೈನ ಮಾಲ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಶೇಷ ಸ್ಕ್ರೀನಿಂಗ್​​ನಲ್ಲಿ​ ಪತಿ ರಣವೀರ್ ಸಿಂಗ್, ಅತ್ತೆ ಅಂಜು ಭವ್ನಾನಿ ಮತ್ತು ರಿತಿಕಾ ಭವ್ನಾನಿ ಅವರ ಜತೆ ದೀಪಿಕಾ ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಲು ಬಂದಿದ್ದ ರಣವೀರ್​ ಸಿಂಗ್​ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಪ್ರತ್ಯೇಕ ವಾಹನಗಳಲ್ಲಿ ಇಳಿಯುತ್ತಿರುವುದು ವೈರಲ್​ ಆಗುತ್ತಿರುವ ವೀಡಿಯೊದಲ್ಲಿ ಕಂಡುಬಂದಿದೆ.

ಕಲ್ಕಿ 2898 AD ನೋಡಿದ ಬಳಿಕ ರಣವೀರ್​ ಸಿಂಗ್​​​ ಚಿತ್ರವನ್ನು ಮೆಚ್ಚಿಕೊಂಡು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ. ಸಿನಿಮಾ ತಂಡದಲ್ಲಿನ ಎಲ್ಲರನ್ನು ಹೊಗಳಿದ್ದಾರೆ. ಕಲ್ಕಿ 2898 AD ಒಂದು ಅತ್ಯದ್ಭುತ ಸಿನಿಮೀಯ ದೃಶ್ಯವನ್ನು ಹೊಂದಿರುವ ದೊಡ್ಡ ಪರದೆಯ ಸಿನಿಮಾ! ತಾಂತ್ರಿಕ ನಿರ್ವಹಣೆಯಲ್ಲಿ ಅಭೂತಪೂರ್ವ ಮಟ್ಟದ ಕೌಶಲ. ನಾಗಿ ಸರ್ ಮತ್ತು ತಂಡಕ್ಕೆ ಅಭಿನಂದನೆಗಳು! ಪ್ರಭಾಸ್ - ರೆಬೆಲ್ ಸ್ಟಾರ್ ರಾಕಿಂಗ್! ಕಮಲ್ ಹಾಸನ್ ಉಲಗನಾಯಗನ್ ಎಂದೆಂದಿಗೂ ಸರ್ವಶ್ರೇಷ್ಠ! ನೀವು ನನ್ನಂತಹೇ ಅಮಿತಾಬ್ ಬಚ್ಚನ್ ಅಭಿಮಾನಿಯಾಗಿದ್ದರೆ ನೀವು ಸಿನಿಮಾ ನೋಡುವುದನ್ನು ತಪ್ಪಿಸಿಕೊಳ್ಳಬಾರದು! ನನ್ನ ಪ್ರೀತಿಯ ದೀಪಿಕಾ ಪಡುಕೋಣೆ ಪಾತ್ರವನ್ನು ಪ್ರತಿ ಕ್ಷಣದಲ್ಲು ಹೆಚ್ಚಿಸಿದ್ದೀರಿ ಎಂದಿದ್ದಾರೆ.

ದೀಪಿಕಾ ಮತ್ತು ರಣವೀರ್ ಬಿ-ಟೌನ್‌ನ ಪ್ರಸಿದ್ಧ ಜೋಡಿಗಳಲ್ಲಿ ಒಬ್ಬರು. ಈ ಜೋಡಿಯನ್ನು 'ದೀಪ್ವೀರ್' ಎಂದು ಕರೆಯಲಾಗುತ್ತದೆ. ದೀಪಿಕಾ ಪಡುಕೋಣೆ ನಟಿಸಿರುವ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾ ಸಿಂಗಮ್​ ಎಗೇನ್​​​ ನವೆಂಬರ್​ 1ರಂದು ತೆರೆ ಕಾಣಲಿದೆ. ಸಿನಿಮಾದಲ್ಲಿ ದೀಪಿಕಾ ಮತ್ತು ರಣವೀರ್ ಇಬ್ಬರೂ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net