ಶ್ರೀ ಪಾಂಡುರಂಗ ರುಕ್ಮಾಯಿ ದಿಂಡಿ ಉತ್ಸವ ಮೇ 7ರಿಂದ

je721538035802367-abc
Published on

ರಾಣೆಬೆನ್ನೂರ: ಇಲ್ಲಿನ ದೇವರಗುಡ್ಡ ರಸ್ತೆಯ ಬಸವನಗುಡಿ ನಗರದಲ್ಲಿ ಶ್ರೀ ಪಾಂಡುರಂಗ ರುಕ್ಮಾಯಿ ದೇವಸ್ಥಾನದಲ್ಲಿ ಮೇ 7ರಿಂದ 9ರ ವರೆಗೆ ಶ್ರೀ ಪಾಂಡುರಂಗ ರುಕ್ಮಾಯಿ ದಿಂಡಿ ಉತ್ಸವ ಸಮಾರಂಭದ ಅಂಗವಾಗಿ ವಿವಿಧ ಕಾರ್ಯಕ್ರಮ ಜರುಗಲಿವೆ.

ಮೇ 7ರಂದು ಸಂಜೆ 4ಕ್ಕೆ ನಾಮದೇವ ಸಿಂಪಿ ಸಮಾಜದ ರಾಜ್ಯಾಧ್ಯಕ್ಷ ನಾರಾಯಣಪ್ಪ ಕೋಪರ್ಡೆ ನೇತೃತ್ವದಲ್ಲಿ ಕುಂಭಮೇಳ, ಮೂತಿರ್ಗಳ ನಗರ ಪ್ರದಕ್ಷಿಣೆ ಹಾಗೂ ಗುರುಗಳು, ಸಂತರಿಂದ ಶೋಭಾಯಾತ್ರೆ ಮತ್ತು ಪೋತಿ ಸ್ಥಾಪನೆ ಜರುಗುವುದು. ಮೇ 8ರಂದು ಬೆಳಗ್ಗೆ 5ರಿಂದ ಕಾಕಡಾರತಿ ಭಜನೆ, 6.30ರಿಂದ 10ರ ವರೆಗೆ ಸಮಾಜ ಬಾಂಧವರಿಂದ ಶ್ರೀ ಮಹಾಗಣಪತಿ, ಶ್ರೀ ಪಾಂಡುರಂಗ ರುಕ್ಮಿಣಿ, ಶ್ರೀ ತುಳಜಾಭವಾನಿದೇವಿಯ ಕಳಸಾರೋಹಣ, ಮಹಾಮಸ್ತಕಾಭಿಷೇಕ, ಅಭ್ಯಂಗ ಸ್ನಾನ, ತೀರ್ಥ ಸ್ನಾನ, ಮಹಾಮಂಗಳಾರತಿ, ಶ್ರೀ ಸಂತ ನಾಮದೇವ ಮಹಾರಾಜರ ಹಾಗೂ ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಮೂತಿರ್ ಪ್ರತಿಷ್ಠಾಪನೆ ಮತ್ತು ದೇವಸ್ಥಾನದ ಮೂಲ ಸಂಸ್ಥಾಪಕ ಭರಮಪ್ಪ ಪಾಸ್ತೆ ಅವರ ಮೂತಿರ್ ಅನಾವರಣ ಜರುಗುವುದು. 10ರಿಂದ ಸಕಲ ಸಂತ ಶಿರೋಮಣಿಗಳಿಂದ ಭಜನೆ, ಕೀರ್ತನೆ, ಹೋಮ, ಹವನ ನಡೆಯುವುದು.

ಸಂಜೆ 6ರಿಂದ ರಾತ್ರಿ 8.30ರ ವರೆಗೆ ಪಂಡರಾಪುರದ ಪ್ರಭಾಕರ ಬುವಾ ಭೋದಲೆ ಮಹಾರಾಜ, ಯಶವಂತ ಬುವಾ ಬೋದಲೆ ಮಹಾರಾಜ, ಬಂಕಾಪುರದ ಭಾನುದಾಸದ ಸರ್ವದೇ, ದಾವಣಗೆರೆ ಚಂದ್ರಕಾಂತರ ಬಾದೋನಿ ಇನ್ನಿತರರಿಂದ ಕೀರ್ತನ, ಪ್ರವಚನ ಕಾರ್ಯಕ್ರಮ ಜರುಗುವುದು.

ರಾತ್ರಿ 8.30ರಿಂದ 9ರ ವರೆಗೆ ಸಂತರ ಭೇಟಿ ಕಾರ್ಯಕ್ರಮ, ನಂತರ ಆಕಾಶವಾಣಿ ಕಲಾವಿದೆ ರಜನಿ ಕರಿಗಾರ ಅವರಿಂದ ಸಂತವಾಣಿ ಮತ್ತು ಸಂಗೀತ ಕಾರ್ಯಕ್ರಮ ಜರುಗಲಿದೆ. ಮೇ 9ರಂದು ಬೆಳಗ್ಗೆ 5ಕ್ಕೆ ಕಾಕಡಾರತಿ, 8ಕ್ಕೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಪಾಂಡುರಂಗ ರುಕ್ಮಾಯಿ ಪಲ್ಲಕ್ಕಿ ಉತ್ಸವ, ಸಂತ ಪೂಜಾ, ಮಹಾ ಮಂಗಳಾರತಿ, ಸಂತ ಸಮಾರಾಧನೆ, ಶ್ರೀ ಸಂತ ನಾಮದೇವ ಸಮುದಾಯ ಭವನದ ಲೋಕಾರ್ಪಣೆ ಜರುಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net