

ರಾಣೆಬೆನ್ನೂರ: ಇಲ್ಲಿಯ ಅಶೋಕ ವೃತ್ತದಲ್ಲಿ ಪ್ರತಿಷ್ಠಾಪಿಸಿರುವ ವಿರಾಟ್ ಹಿಂದು ಮಹಾಗಣಪತಿ 3ನೇ ವರ್ಷದ ಗಣೇಶೋತ್ಸವ ನಿಮಿತ್ತ ಸೆ. 21ರಿಂದ 29ರ ವರೆಗೆ ವಿವಿಧ ಧಾಮಿರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭೆ ಸದಸ್ಯ ಹಾಗೂ ಗಣಪತಿ ಸಮಿತಿ ಅಧ್ಯಕ್ಷ ಕೆಎಂಪಿ ಮಣಿ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. 21, 22ರಂದು ಸಂಜೆ 6 ಗಂಟೆಗೆ ಶಾಲಾ ಮಕ್ಕಳಿಂದ ವಿವಿಧ ಸಾಂಸತಿಕ ಕಾರ್ಯಕ್ರಮ ಜರುಗಲಿವೆ. ಸೆ. 26ರಂದು ಬೆಳಗ್ಗೆ ಗಣಹೋಮ ಹಾಗೂ ಮಧ್ಯಾಹ್ನ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ಸೆ. 29ರಂದು ಬೆಳಗ್ಗೆ 10.30ಕ್ಕೆ ಗಣಪತಿ ಮೂತಿರ್ಯ ಶೋಭಾಯಾತ್ರೆ ಜರುಗಲಿದೆ.
ಅಶೋಕ ವೃತ್ತದಿಂದ ಮೆರವಣಿಗೆ ಪ್ರಾರಂಭಗೊಂಡು ಪೋಸ್ಟ ವೃತ್ತ, ಸಂಗಮ್ ವೃತ್ತ, ಕುಂಬಾರ ಓಣಿ, ದೊಡ್ಡಪೇಟೆ, ಎಂ.ಜಿ. ರಸ್ತೆ, ದುರ್ಗಾ ವೃತ್ತ, ಕುರುಬಗೇರಿ ಮಾರ್ಗವಾಗಿ ಹರಿಹರ ಬಳಿ ತುಂಗಭದ್ರಾ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಗುವುದು. ಶೋಭಾಯಾತ್ರೆಯಲ್ಲಿ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿದೆ. ರಸ್ತೆಯುದ್ದಕ್ಕೂ ಅನ್ನಸಂತರ್ಪಣೆ ಇರಲಿದೆ ಎಂದು ತಿಳಿಸಿದರು.
ಪ್ರಮುಖರಾದ ಜಗದೀಶ ಎಲಿಗಾರ, ರವಿ ಹಿರೇಬಿದರಿ, ನಾಗರಾಜ ಸಾಲಗೇರಿ, ಪ್ರಕಾಶ ಮೈದೂರ, ರಾಯಣ್ಣ ಮಾಕನೂರ, ಕೋಟ್ರೇಶ ಕೆಂಚಪ್ಪನವರ, ವಿಜಯ ಚಳಗೇರಿ, ಶಿವು ಹರಕನಾಳ, ಜಗದೀಶ ಅಂಕಲಕೋಟಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.