ಭೀತಿ ಭಯದಿಂದ್ದರೆ ಮನುಷ್ಯ ಸುಧಾರಣೆ; ಕಾಶಿ ಜಗದ್ಗುರುಗಳ ಸಲಹೆ

oplus_0
oplus_0
Published on

ರಾಣೆಬೆನ್ನೂರ: ಶನಿ ಗೃಹವೆಂದರೆ ಬಹಳಷ್ಟು ಕಾಡುತ್ತದೆ ಎಂಬ ನಂಬಿಕೆಯಿದೆ. ಆದರೆ, ಅದು ಒಳ್ಳೆಯವರನ್ನು ಎಂದಿಗೂ ಕಾಡುವುದಿಲ್ಲ. ಕೆಟ್ಟವರನ್ನು ಕಾಡದೆ ಬೀಡಲ್ಲ. ಮನೆಯಲ್ಲಿ ಹಿರಿಯ ಭೀತಿ ಇರಬೇಕು. ಭೀತಿ ಭಯದಿಂದ ಇದ್ದರೆ ಮನುಷ್ಯ ಸುಧಾರಣೆ ಜೀವನ ನಡೆಸಲು ಸಾಧ್ಯ ಎಂದು ಕಾಶಿ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಶನೇಶ್ಚರ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಅತಿರುದ್ರ ಮಹಾಯಾಗದ ಪೂರ್ಣಾಹುತಿ ಹಾಗೂ ಧರ್ಮಸಭೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬಾಲ್ಯ, ತರುಣ ಕಾಲದಲ್ಲಿ ಮರಣದ ಭೀತಿ ಬರಲ್ಲ. ವೃದ್ಧಾಪ್ಯ ಯಾವಾಗ ಬರುತ್ತದೆಯೋ ಆವಾಗ ಮರಣದ ಭೀತಿ ಕಾಡಲು ಶುರು ಆಗುತ್ತದೆ. ಮನುಷ್ಯ ಆಗ ಸುಧಾರಣೆ ಕಾಣಲು ಭಯಸುತ್ತಾನೆ. ಆದರೆ, ಮನುಷ್ಯ ಎಷ್ಟು ಬೇಗ ಸುಧಾರಣೆ ಹೊಂದುತ್ತಾನೆ ಎಂಬುದು ಬಹಳ ಮುಖ್ಯವಾಗಿದೆ.

ದೇಶದ ಪ್ರಜೆಗಳು ಎಂಥ ವಿದ್ಯೆ ಗಳಿಸಬೇಕು ಎಂದರೆ ಸಮಾಜದಲ್ಲಿ ಪ್ರತಿಯೊಬ್ಬರೂ ಗುರುತಿಸಬೇಕು. ಬಾಲ್ಯದಲ್ಲಿ ಒಳ್ಳೆಯ ವಿದ್ಯೆ ಕಲಿತು ಉನ್ನತ ಹುದ್ದೆ ಏರಬೇಕು. ತರುಣ ಸಮಯದಲ್ಲಿ ಒಳ್ಳೆಯ ವೃತ್ತಿ ಹೊಂದಿ ಸಮಾಜಕ್ಕೆ ಕೊಡುಗೆ ಕೊಡಬೇಕು. ನಂತರ ಯೋಗಿ ಮಾರ್ಗದ ಮೂಲಕ ದೇಹ ತ್ಯಜಿಸಬೇಕು. ಆದರೆ, ಇಂದಿನ ದಿನದಲ್ಲಿ ರೋಗಿಯಾಗಿ ಜೀವ ಬಿಡುವ ಸ್ಥಿತಿ ಬಂದಿರುವುದು ದುರದುಷ್ಟಕರ ಸಂಗತಿಯಾಗಿದೆ ಎಂದರು.

ನವಗ್ರಹದಲ್ಲಿ ಶನೇಶ್ಚರ ನಿಧಾನಗತಿಯಲ್ಲಿ ಹೋಗುತ್ತಾನೆ. ಎಲ್ಲ ಗ್ರಹಗಳು ಆಯಾ ಕಾಲಕ್ಕೆ ತಕ್ಕಂತೆ ನಡೆಯುತ್ತವೆ. ವೃದ್ಧರು ಶನಿದೇವರ ಸಮಾನವಾಗಿದ್ದಾರೆ. ದೇವಸ್ಥಾನಕ್ಕೆ ಹೋಗುವ ಬದಲು ಮನೆಯಲ್ಲಿರುವ ವೃದ್ಧರ ಸೇವೆ ಮಾಡಬೇಕು. ಅವರನ್ನು ಪೂಜಿಸಬೇಕು. ಇದರಿಂದ ಶನಿ ದೂರವಾಗಲು ಸಾಧ್ಯ. ಅಜ್ಞಾನಿಯಂತೆ ಬದುಕುವ ಬದಲು ಜ್ಞಾನಿಯಾಗಿ ಬದುಕಬೇಕು. ನಿತ್ಯವು ಗುರು ಹಿರಿಯರಿಗೆ ನಮಸ್ಕಾರ ಮಾಡಬೇಕು. ಇದನ್ನು ಮಾಡುವವರಿಗೆ ಆಯುಷ್ಯ ವೃದ್ಧಿಯಾಗಲು ಸಾಧ್ಯ. ಆದ್ದರಿಂದ ಭಾರತೀಯ ಸಂಸತಿಯಲ್ಲಿ ಹಿರಿಯರಿಗೆ ಗೌರವ ಕೊಡುತ್ತಾರೆ ಎಂದರು.

ಬ್ಯಾಡಗಿ ತಾಲೂಕಿನ ಗುಡ್ಡದ ಮಲ್ಲಾಪೂರದ ಮೂಖಪ್ಪ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ, ಶಿವನಾಗಯ್ಯ ಶಾಸ್ತ್ರೀಗಳು ಪೂರ್ಣಾಹುತಿ ನಡೆಸಿಕೊಟ್ಟರು. ಸಂಜೆ ಸಿದ್ಧಾಂತ ಶಿಖಾಮಣಿ ಪ್ರವಚನ ಮಂಗಲೋತ್ಸವ ಜರುಗಿತು.

ಮಾಜಿ ಸಂಸದ ಮಂಜುನಾಥ ಕುನ್ನೂರ, ಎಸ್​.ಎಸ್​. ರಾಮಲಿಂಗಣ್ಣನವರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net