

ರಾಣೆಬೆನ್ನೂರ: ರಾಯಣ್ಣ, ಕನಕದಾಸರ ಮೂತಿರ್ ಪ್ರತಿಷ್ಠಾಪಿಸುವುದರಿಂದ ಕುರುಬ ಸಮಾಜವು ಸಂಘಟನೆ ಆಗುವುದಿಲ್ಲ. ಬದಲಾಗಿ ಅಭಿಮಾನ ಬರುತ್ತದೆ. ಆದರೆ, ಅವರುಗಳ ಆದರ್ಶಗಳನ್ನು ಸರ್ವರೂ ಮೈಗೂಡಿಸಿಕೊಂಡು ಮುನ್ನಡೆದರೆ ಸಮಾಜದ ಏಳಿಗೆ ಆಗಲು ಸಾಧ್ಯ ಎಂದು ಕಾಗಿನೆಲೆ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಹಲಗೇರಿ ರಸ್ತೆಯ ಬೈಪಾಸ್ ಹತ್ತಿರದಲ್ಲಿ ನೂತನವಾಗಿ ನಿಮಿರ್ಸಿರುವ ಕಾಂತ್ರೀವಿರ ಸಂಗೊಳ್ಳಿ ರಾಯಣ್ಣನ ಕಂಚಿನ ಪುತ್ಥಳಿಯ ಅನಾವರಣ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶರಣರ ಹಾಗೂ ದಾರ್ಶನಿಕರ ಆದರ್ಶಗಳ ಪಾಲನೆಯಿಂದ ಸಮಾಜ ಸಂಘಟನೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಸರ್ವರೂ ಸಮಾಜದ ಸಂಘಟನೆಗೆ ಆದ್ಯತೆ ನೀಡಬೇಕು ಎಂದರು.
ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ನಾಮಫಲಕ ಉದ್ಘಾಟಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ಅಧ್ಯಕ್ಷ ಕುಬೇರಪ್ಪ ಕೊಂಡಜ್ಜಿ ಅಧ್ಯಕ್ಷತೆ ವಹಿಸಿದ್ದರು. ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕ ಭರಮಪ್ಪ ಪೂಜಾರ ನೇತೃತ್ವ ವಹಿಸಿದ್ದರು. ರಾಜ್ಯ ಕಾಂಗ್ರೆಸ್ ವಕ್ತಾರ ನಿಖಿತ್ ರಾಜ್ ಮೌರ್ಯ ಉಪನ್ಯಾಸ ನೀಡಿದರು.
ಮಕ್ಕಳ ತಜ್ಞ ಡಾ. ಪ್ರವಿಣ ಖನ್ನೂರ, ಚೋಳಪ್ಪ ಕಸವಾಳ, ಮಂಜುನಾಥ ಗೌಡಶಿವಣ್ಣನವರ, ನಿಂಗಪ್ಪ ಗುತ್ತಪ್ಪಗೌಡ್ರು, ನಗರಸಭೆ ಸದಸ್ಯರಾದ ನಿಂಗಪ್ಪ ಕೋಡಿಹಳ್ಳಿ, ರಮೇಶ ಕರಡೆಣ್ಣನವರ, ಮುಖಂಡರಾದ ಬಸವರಾಜ ಕಂಬಳಿ, ಷಣ್ಮುಖಪ್ಪ ಕಂಬಳಿ, ಹನುಮಂತಪ್ಪ ದೇವರಗುಡ್ಡ, ಮಾಳಪ್ಪ ಪೂಜಾರ, ಆನಂದ ಹುಲಬನ್ನಿ, ರಾಜು ಮೈಲಾರ, ಮೂರ್ತೆಪ್ಪ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.