ಶಸಕ್ತ ಸಮಾಜ ಕಟ್ಟುವ ಕೆಲಸವಾಗಲಿ; ಗೋಪಾಲ ನಾಗರಕಟ್ಟೆ

7-RNR-04
Published on

ರಾಣೆಬೆನ್ನೂರ: ಭವಿಷ್ಯದ ಯುವ ಜನಾಂಗಕ್ಕೆ, ತಲ ತಲಾಂತರದಿಂದ ಬಂದಿರುವ ನಮ್ಮ ಸನಾತನ ಧರ್ಮದ ಹಿಂದು ಸಂಸತಿಯ ಬಗ್ಗೆ ಸಮಗ್ರವಾಗಿ ಅರಿವು ಮೂಡಿಸುವ ಮತ್ತು ಸಶಕ್ತ ಸಮಾಜ ಕಟ್ಟುವ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ವಿಶ್ವ ಹಿಂದು ಪರಿಷತ್​ ರಾಷ್ಟ್ರೀಯ ಜಂಟಿ ಕಾರ್ಯದಶಿರ್ ಗೋಪಾಲ ನಾಗರಕಟ್ಟೆ ಹೇಳಿದರು.
ನಗರದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ರಾಣೆಬೆನ್ನೂರ ಕಾ ರಾಜಾ ಗಣೇಶೋತ್ಸವದ ಧರ್ಮಸಭೆ ಹಾಗೂ ಮಹಿಳಾ ಜಾಗೃತಿ ಸಮಾರಂಭದಲ್ಲಿ ಅವರು ವಿವೇಕಧಾರಾ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಹಿಂದು ಧರ್ಮದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಸಮಗ್ರ ಭಾರತೀಯರ ಬಹು ವರ್ಷಗಳ ಕನಸು ಮತ್ತು ಸಂಕಲ್ಪ ಅಯೋಧ್ಯ ರಾಮಮಂದಿರ ನಿರ್ಮಾಣದಿಂದಾಗಿ ಇಂದು ನನಸಾಗಿದೆ. ಪ್ರತಿಯೊಬ್ಬ ಭಾರತೀಯರು, ಅಯೋಧ್ಯೆಗೆ ಧಾವಿಸಿ ಬಾಲ ರಾಮನ ದರ್ಶನವನ್ನು ಪಡೆದು ಜನ್ಮ ಸಾರ್ಥಕತೆ ಹೊಂದಬೇಕು. ಇದಕ್ಕೆ ಯಾವುದೇ ಶುಲ್ಕವಿರುವುದಿಲ್ಲ ಎಲ್ಲವೂ ಉಚಿತವಾಗಿ ಸಿಗಲಿದೆ. ಕುಟುಂಬ ಸಮೇತವಾಗಿ ಅಯೋಧ್ಯೆಗೆ ಧಾವಿಸಬೇಕು ಎಂದು ಮನವಿ ಮಾಡಿದರು.
ಸಾನ್ನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜಿ ಮಹಾರಾಜ್​ ಮಾತನಾಡಿ, ಸಮಾಜದಲ್ಲಿ ಕೂಡುವುದಕ್ಕಿಂತ, ವಡೆಯುವವರೆ ಹೆಚ್ಚಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತದ ಸನಾತನ ಧರ್ಮ ಮತ್ತು ಸಂಸತಿಯನ್ನು, ಸ್ವಾಮಿ ವಿವೇಕಾನಂದರ ಆಸೆಯಂತೆ ಪ್ರತಿಯೊಬ್ಬ ಭಾರತೀಯರು ಅವರ ಸಂದೇಶಗಳನ್ನು ಆಲಿಸಿ, ಅರ್ಥ ಮಾಡಿಕೊಂಡು ಸುಭದ್ರ ಭಾರತ ಕಟ್ಟುವ ನಿಟ್ಟಿನಲ್ಲಿ ಕೈ ಜೋಡಿಸಬೇಕು ಎಂದರು.
ರಾಯಚೂರಿನ ಕೃಷಿ ಸಾಧಕಿ ಕವಿತಾ ಮಿಶ್ರಾ ಮಾತನಾಡಿ, ಕಾಯಕದಲ್ಲಿ ಕೈಲಾಸ ಕಾಣುವ ಎನ್ನುವ ಬಸವಣ್ಣನವರ ವಾಣಿಯಂತೆ ನಾವೆಲ್ಲರೂ ಕೃಷಿ ಕಾಯಕ ಯೋಗಿಗಳಾಗಬೇಕು. ಭಾರತ ಪುಣ್ಯಭೂಮಿಯಾಗಿದ್ದು, ಇದನ್ನು ನಂಬಿದವರಿಗೆ ಎಂದಿಗೂ ಸೋಲಿಲ್ಲ. ವೈಟ್​ ಕಲರ್​ ಜಾಬ್​ ನ್​ ಆಸೆಗಾಗಿ, ಇಂದಿನ ಯುವ ಸಮುದಾಯ ಬಹುತೇಕ ಕೃಷಿ ವಿಮುಖರಾಗಿದ್ದೇವೆ. ಇದು ಬದಲಾಗಬೇಕು ಎಂದರು.
ತುಮಕೂರಿನ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರುಡಿಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಂದನ್​ ಶೆಟ್ಟಿ ಮತ್ತು ತಂಡದವರು ಪ್ರದಶಿರ್ಸಿದ ನೃತ್ಯ ಹಾಗೂ ವಿವಿಧ ಸಾಂಸತಿಕ ಕಾರ್ಯಕ್ರಮ ಗಮನ ಸೆಳೆದವು.
ಸಂಸತ ವಿಶ್ವವಿದ್ಯಾಲಯದ ಕುಲಸಚಿವ ವಿಶ್ವನಾಥ ಹಿರೇಮಠ, ಪ್ರಮುಖರಾದ ಬಿ.ಎಂ. ಸೋಮಶೇಖರ, ಸಿದ್ಲಿಂಗಪ್ಪ ಕಮಡೊಳ್ಳಿ, ಇಂದ್ರಕುಮಾರ ಎಚ್​.ಕೆ., ಬಸವರಾಜ ಕೊಪ್ಪದ, ಪ್ರಮೋದ ನೆಲವಾಗಲ, ಗುಡ್ಡಪ್ಪ ಮಾಳಗುಡ್ಡಪ್ಪನವರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net