ಗಮನ ಸೆಳೆದ ದುರ್ಗಾ ದೌಡ್​ ಪಥ ಸಂಚಲನ

30-RNR-07
Published on

ರಾಣೆಬೆನ್ನೂರ: ಸ್ಥಳಿಯ ಹಿಂದು ಪ್ರತಿಷ್ಠಾಣ ಒಕ್ಕೂಟ ವತಿಯಿಂದ ದಸರಾ ಮಹೋತ್ಸವದ ಅಂಗವಾಗಿ ಮಂಗಳವಾರ 6ನೇ ವರ್ಷದ ದುರ್ಗಾ ದೌಡ್​ ಪಥಸಂಚಲನ ನಗರದಲ್ಲಿ ಸಂಭ್ರಮ ಸಡಗರದಿಂದ ಜರುಗಿತು.

ನಗರದ ಸಂಗಮ ಸರ್ಕಲ್​ ಬಳಿಯ ಶ್ರೀರಾಮ ದೇವಸ್ಥಾನದಿಂದ ಆರಂಭವಾದ ಪಥಸಂಚಲನಕ್ಕೆ ಶಹರ ಠಾಣೆಯ ಡಿವೈಎಸ್ಪಿ ಲೋಕೇಶ ಜೆ. ಚಾಲನೆ ನೀಡಿದರು. ನಂತರ ಗಾಂಧಿಗಲ್ಲಿ, ತಳವಾರ ಓಣಿ, ಎಂ.ಜಿ.ರಸ್ತೆ, ದುರ್ಗಾ ಸರ್ಕಲ್​, ತುಳಜಾ ಭವಾನಿ ದೇವಸ್ಥಾನ, ಗುತ್ತಲ ಬಸ್​ ನಿಲ್ದಾಣ, ದೇವರಗುಡ್ಡ ರಸ್ತೆ, ಕಂಚಗಾರ ಓಣಿ, ದೊಡ್ಡಪೇಟೆ ಬಸವೇಶ್ವರ ದೇವಸ್ಥಾನ, ಚಲವಾದಿ ಓಣಿ, ರೋಡನವರ ಓಣಿ, ಗಣೇಶ ದೇವಸ್ಥಾನದಿಂದ ಅಂಬಾಭವಾನಿ ದೇವಸ್ಥಾನದ ಬಂದು ಸೇರಿತು. ಮಾರ್ಗದುದ್ದಕ್ಕೂ ಸಾವಿರಾರು ಜನರು ಮೆರವಣಿಗೆ ವೀಕ್ಷಿಸಿದರು. ಹೂವಿನ ಮಳೆ ಗರೆದು ಬರಮಾಡಿಕೊಂಡರು.

ದುರ್ಗಾ ದೌಡ್​ ಪಾದಯಾತ್ರೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ತಲೆಗೆ ಕೇಸರಿ ಪೇಟ ಮತ್ತು ಬಿಳಿ ಬಟ್ಟೆ ಧರಿಸಿ ಕೇಸರಿ ರುಮಾಲು ಸುತ್ತಿಕೊಂಡು ಗಮನ ಸೆಳೆದರು. ಸಾಲು ಸಾಲಾಗಿ ಮತ್ತು ಶಿಸ್ತು ಬದ್ಧವಾಗಿ ಮೆರವಣಿಗೆಯಲ್ಲಿ ಎಲ್ಲರೂ ಭಗವಾಧ್ವಜ ಹಾಗೂ ಖಡ್ಗ ಹಿಡಿದು ಜನಜಾಗೃತಿ ಮೂಡಿಸಿದರು.

ಪ್ರಮುಖರಾದ ಭಾರತಿ ಜಂಬಗಿ, ಯುವರಾಜ ಬಾರಟಕ್ಕೆ, ಕೃಷ್ಣಾಸಾ ಪವಾರ, ರಾಜು ಇರಕಲ್ಲ, ವಿನಯಗೌಡ ಬಾಳನಗೌಡ್ರ, ನಾಗರಾಜ ಕೊರವರ, ರುದ್ರೇಶ ಬುಕ್ಕಶೆಟ್ಟಿ, ಬಿರೇಶ ಗುದಿಗೇರ, ಚನ್ನಬಸಪ್ಪ ಹೊಂಕರಣ್ಣ, ಎಸ್​.ವಿ. ಬಳ್ಳಾರಿ, ಅನಿಲ ಮಳವಳ್ಳಿ, ಮಂಜು ಉಪ್ಪಾರ, ಸಂತೋಷ ದೈವಾಜ್ಞ, ನಾಗರಾಜ ಜಿಂಗಾಡೆ, ಸುನಿಲ್​ ಮಿಸ್ಕಿನ್​, ಪ್ರವಿಣ ಕೋಪರ್ಡ್​, ಗಜಾನನ ಲದ್ವಾ, ಅರುಣಾ ಕಬಾಡೆ, ಗೀತಾಬಾಯಿ, ರಾಜೇಶ್ವರಿ ಮೆತ್ರಾನಿ, ನೇಹಾ ಇರಕಲ್​, ವಿಕಾಸ ಹಬೀಬ ಹಾಗೂ ನೂರಾರು ಮಹಿಳೆಯರು, ಮಕ್ಕಳು, ಯುವಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net