ಮಹಾಭಾರತ ಅರಿತುಕೊಂಡರೆ ಜೀವನದಲ್ಲಿ ಯಶಸ್ಸು; ಶ್ರೀ ರು ವಿಜಯತೀರ್ಥ ಶ್ರೀಪಾದಂಗಳವರು

1-RNR-06
Published on

ರಾಣೆಬೆನ್ನೂರ: ಶ್ರೀ ಕೃಷ್ಣ ಮತ್ತು ಅರ್ಜುನ ಅವರ ಯುದ್ಧ ಭೂಮಿಯಲ್ಲಾದ ಸಂವಾದವನ್ನು ಶ್ರೀ ಮಾಹಾಭಾರತ ನಿರ್ಮಾಣದ ಕಾರಣರಾದ ವೇದವ್ಯಾಸರು ಭೀಷ್ಮ ಪರ್ವದಲ್ಲಿ 18ನೇ ಅಧ್ಯಾಯಗಳ ರೂಪದಲ್ಲಿ ನಿರೂಪಿಸಿದ್ದಾರೆ. ಇದನ್ನು ಅರಿತುಕೊಂಡರೆ ಮನುಷ್ಯ ಜೀವನದಲ್ಲಿ ಯಶಸ್ಸಿನತ್ತ ಸಾಗಬಲ್ಲ ಎಂದು ಕೂಡಲಿಯ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಆರ್ಯ ಅೋಭ್ಯತಿರ್ಥ ಮಠದ ರು ವಿಜಯತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಕೋಟೆಯ ವಿದ್ಯಾ-ದೀಶತೀರ್ಥರ ಹಾಗೂ ಶ್ರೀ ಸತ್ಯಾಭಿ ತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಗುರುವಾರ ಚಾರ್ತುಮಾಸ್ಯದ ನಿಮಿತ್ತ 2ನೇ ದಿನದ ಉಪನ್ಯಾಸ ಮಾಲಿಕೆಯಲ್ಲಿ ಭಗವದ್ಗೀತೆ ಕುರಿತು ಅವರು ವಿವರಿಸಿದರು.
ಪಾಂಡವ ಕೌರವರ ಮಧ್ಯ ಭಗವಂತನ ಸಂಕಲ್ಪದಂತೆ ಸಂಧಾನವು ವಿಲವಾಗಿ ಯುದ್ಧ ನಿಶ್ಚಯವಾಯಿತು. ಕೌರವ ಹಾಗೂ ಪಾಂಡವರ ಸೈನ್ಯಗಳು ಕುರುೇತ್ರದಲ್ಲಿ ಸೆಣಸಾಡಲು ನಿಂತಿರುವ ಸಂದರ್ಭದಲ್ಲಿ ಇದು ಬಂಧುಗಳನ್ನು ಸಂಹಾರ ಮಾಡುವ ಪ್ರಸಂಗವಾಗಿದೆ. ಯುದ್ಧವು ಎಂದುಕೊಂಡು ಇಂಥಾ ಬಂಧು ಬಾಂಧವರ ಸಂಹಾರವನ್ನು ಮಾಡಬೇಕಾದ ಪ್ರಸಂಗ ಪ್ರಾಪ್ತವಾಯಿತಲ್ಲಾ ಎಂದು ಅರ್ಜುನ ಕಸವಿಸಿಗೊಳ್ಳುತ್ತಾನೆ. ಅದನ್ನು ಶ್ರೀ ಕೃಷ್ಣನ ಮುಂದೆ ತೋಡಿಕೊಂಡನು.
ಗುರುಗಳಾದ ಭೀಷ್ಮಾದಿ ಹಿರಿಯರು ದ್ರೋಣಾಚಾರ್ಯರಂಥ ಗುರುಗಳನ್ನು ಮತ್ತು ಅನೇಕ ಬಂಧಗಳನ್ನು ಸಂಹಾರ ಮಾಡಿ ಅವರ ರಕ್ತದಿಂದ ತೊಯ್ದ ಭೂಮಿಯನ್ನು ನಾವು ಪಾಂಡವರು ಆಳಬೇಕೇ? ಯುದ್ಧವೆಂದ ಮೇಲೆ ಸಾವು ಬದುಕುಗಳು ಅನಿಶ್ಚಿತ ನಮ್ಮನ್ನು ಶತ್ರುಗಳು ಕೊಂದರೆ ಜೀವನವೇ ಮುಗಿದು ಸುಖ ಪಡೆಯುವ ಅವಕಾಶವೇ ಇರುವುದಿಲ್ಲ.
ನಾವು ಕೌರವರನ್ನು ಸಂಹಾರ ಮಾಡಿದಾಗ ರಾಜ್ಯವೇನು ಸಿಗಬಹುದು. ಆದರೆ ನಿತ್ಯದಲ್ಲಿಯೂ ಕೂಡ ಬಂಧುಗಳ ಸಂಹಾರದಿಂದ ನಮಗೆ ಈ ರಾಜ್ಯ ಭೋಗ ಸಿಕ್ಕಿದ್ದು ಎಂಬ ಸ್ಮರಣೆ ಬರಲೇಬೇಕು. ಭೋಗಮಾಡಿ ಸುಖಪಡುವ ಅವಕಾಶವೂ ಇರುವುದಿಲ್ಲ. ಆದ್ದರಿಂದ ನನಗ ಯುದ್ಧ ಬೇಡ ಎಂದು ಬಿಲ್ಲು ಬಿಟ್ಟು ಕುಳಿತುಕೊಳ್ಳುತ್ತಾನೆ. ಅವನ ಈ ಅನಾವಶ್ಯಕ ಬಂಧು ಮೋಹವನ್ನು ಕಿತ್ತು ಹಾಕಿ ಕರ್ತವ್ಯದ ಕಡೆಗೆ ಮುಖ ಮಾಡಿಸುವ ಶ್ರೀ ಕೃಷ್ಣನ ಮಾತುಗಳೇ ಭಗವದ್ಗೀತೆ ಎಂದು ಕರೆಯಲ್ಪಡುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net