

ರಾಣೆಬೆನ್ನೂರ: 78ನೇ ಸ್ವಾತಂತ್ರೊ$್ಯತ್ಸವ ನಿಮಿತ್ತ ತಾಲೂಕು ಆಡಳಿತ, ನಗರಸಭೆ ವತಿಯಿಂದ ಮಂಗಳವಾರ ನಗರದಲ್ಲಿ ತಿರಂಗಾ ರ್ಯಾಲಿ ನಡೆಸಲಾಯಿತು.
ಸಿದ್ದೇಶ್ವರ ನಗರದ ತಹಸೀಲ್ದಾರ್ ಕಚೇರಿಯಿಂದ ಆರಂಭಗೊಂಡ ತಿರಂಗಾ ರ್ಯಾಲಿ ಹಳೆ ಪಿ.ಬಿ. ರಸ್ತೆ ಮೂಲಕ ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಸ್ ನಿಲ್ದಾಣ ವೃತ್ತಕ್ಕೆ ಬಂದು ಕೊನೆಗೊಂಡಿತು.
ತಹಸೀಲ್ದಾರ್ ಆರ್.ಎಚ್. ಭಗವಾನ್ ರ್ಯಾಲಿಗೆ ಚಾಲನೆ ನೀಡಿದರು.
ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ಬಿಇಒ ಶ್ಯಾಮಸುಂದರ ಅಡಿಗಾರ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಅಶೋಕ ಅರಳೇಶ್ವರ, ಬಸವರಾಜ ಶಿಡೇನೂರ, ವಸಂತ ಪೂಜಾರ, ಮಾಲತೇಶ ದ್ಯಾಮಣ್ಣನವರ, ಸರ್ಕಾರಿ ಪಿಯು ಕಾಲೇಜ್ನ, ಎನ್ಸಿಸಿ ತಂಡ, ಎನ್ಎಸ್ಎಸ್ ತಂಡ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.