

ರಾಣೆಬೆನ್ನೂರ: ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಹಾಗೂ ಸ್ನೇಹಮಹಿ ವಿವೇಕಾನಂದ ಯೋಗ ಕೇಂದ್ರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ 5ನೇ ರಾಜ್ಯಮಟ್ಟದ ಯೋಗಾಸನ ಕ್ರೀಡಾ ಚಾಂಪಿಯನ್ ಶಿಪ್ನ ಟ್ರೆಡಿಶನಲ್ ವಿಭಾಗದ 45ರಿಂದ 55 ವರ್ಷ ವಯೋಮಿತಿಯಲ್ಲಿ ನಗರದ ರಾಜಶ್ರೀ ಉದಗಟ್ಟಿ ದ್ವೀತಿಯ ಸ್ಥಾನ ಹಾಗೂ 35ರಿಂದ 45 ವರ್ಷ ವಯೋಮಿತಿಯಲ್ಲಿ ಭರತ ಹೊನ್ನತ್ತಿ ತೃತೀಯ ಸ್ಥಾನಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.