ನೇಕಾರಿಕೆ ಮಾನವನ ಮಾನ ಕಾಯುವ ಕಾಯಕ; ಡಾ. ಬಸವರಾಜ ಕೇಲಗಾರ

11-RNR-03
Published on

ರಾಣೆಬೆನ್ನೂರ: ನೇಕಾರಿಕೆ ಕೇವಲ ಹೊಟ್ಟೆ ಪಾಡಿನ ಕಸಬಲ್ಲ, ಮಾನವನ ಮಾನ ಕಾಯುವ ಕಾಯಕ ಧರ್ಮವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯ ಡಾ. ಬಸವರಾಜ ಕೇಲಗಾರ ಹೇಳಿದರು.
ಬಿಜೆಪಿ ರಾಜ್ಯ ನೇಕಾರ ಪ್ರಕೋಷ್ಟ ಹಾಗೂ ಜಿಲ್ಲಾ ನೇಕಾರ ಒಕ್ಕೂಟದ ವತಿಯಿಂದ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಸಮಾರಂಭದಲ್ಲಿ ಕೈಮಗ್ಗ ಹಿರಿಯ ನೇಕಾರರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಮನುಷ್ಯನ ಆಕಾರಕ್ಕೆ ಬಟ್ಟೆಗಳನ್ನು ತಯಾರಿಸಿ ಕೊಡುವ ನೇಕಾರರ ವೃತ್ತಿ ದೇವರಿಗೆ ಸಮನಾದದ್ದು. ಕೈಮಗ್ಗ ಉದ್ಯಮವಾಗಿ ಮಾರ್ಪಟ್ಟಿದೆ. ಗ್ರಾಮೀಣರ ಆಥಿರ್ಕತೆ ಹೆಚ್ಚಿಸುವಲ್ಲಿ ಕೈಮಗ್ಗದ ಪಾತ್ರ ಬಹುಮುಖ್ಯವಾಗಿದೆ. ಭಾರತದ ಸಾಂಪ್ರದಾಯಿಕ ಕೈಮಗ್ಗದ ಉತ್ಪನ್ನಗಳನ್ನು ಖರೀದಿಸಿ ನೇಕಾರರಿಗೆ ಆಥಿರ್ಕ ಬಲ ತುಂಬಬೇಕು ಎಂದರು.
ಕೈಮಗ್ಗದ ಹಿರಿಯ ನೇಕಾರರಾದ ತಿಪ್ಪೇಶಪ್ಪ ಚುಂಚಾಲ್​, ಗೋವಿಂದಪ್ಪ ಬೈರವ, ದೇವೆಂದ್ರಪ್ಪ ಅಂಗಡಿ, ಸುಭಾಶ ಪಾಲ್ಮೀರಿ, ಶಿವಣ್ಣ ಅಂಗಡಿ, ಚೌಪದ್​ ರಾಮಣ್ಣ, ಬಸಪ್ಪ ಕಾಂಬಳೆ, ಮೀನಾಮ್ಮ ಜೋಗಾರ, ರತ್ನಮ್ಮ ಜೋಗಾರ ಅವರನ್ನು ಸನ್ಮಾನಿಸಲಾಯಿತು.
ನೇಕಾರ ಒಕ್ಕೂಟದ ಜಿಲ್ಲಾಧ್ಯ ಹನುಮಂತಪ್ಪ ಮುಕ್ತೇನಹಳ್ಳಿ, ಬಿಜೆಪಿ ರಾಜ್ಯ ನೇಕಾರ ಪ್ರಕೋಷ್ಠದ ಸದಸ್ಯ ಬಸವರಾಜ ಲೆ$್ಮಶ್ವರ, ಡಾ. ಲತಾ ಕೇಲಗಾರ, ದ್ಯಾಮಪ್ಪ ಸುಂಕಾಪುರ, ಪ್ರಕಾಶ ಅಂಗಡಿ, ಆರ್​.ಟಿ. ತಾಂಬೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net