ಶ್ರದ್ಧಾ ಭಕ್ತಿಯಿಂದ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವ

19-RNR-03
Published on

ರಾಣೆಬೆನ್ನೂರ: ಇಲ್ಲಿನ ಮೇಡ್ಲೇರಿ ರಸ್ತೆಯ ವಾಗೀಶ ನಗರದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಹಾಗೂ ಸಂಭ್ರಮ ಸಡಗರದಿಂದ ಶನಿವಾರ ಆಚರಿಸಲಾಯಿತು.
ಗೋವಿಂದ ಚಿಮ್ಮಲಗಿ ನೇತೃತ್ವದ ಅರ್ಚಕರ ತಂಡ ಶ್ರೀನಿವಾಸ ಮತ್ತು ಪದ್ಮಾವತಿ ದೇವಿ ಕಲ್ಯಾಣೋತ್ಸವದ ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಕಲ್ಯಾಣೋತ್ಸವದ ನಿಮಿತ್ತ ಅನ್ನಸಂತರ್ಪಣೆ ಜರುಗಿತು.
ದೇವಸ್ಥಾನ ಕಮಿಟಿ ಅಧ್ಯಕ್ಷ ನಾಗರಾಜ ರಾಯಚೂರ, ಪ್ರಮುಖರಾದ ನಾಗರಾಜ ಗೌಡ್ರು, ವೆಂಕಟೇಶ ಬಸ್ತಿಪಾಡ, ಅಶೋಕ ಅರೆಪಲ್ಲಿ, ಹನುಮಂತಪ್ಪ ಅರೆಪಲ್ಲಿ, ಚಂದ್ರು ರಾಯಚೂರ, ಕೆ. ಗುರುರಾಜ, ಅಮಿತ ರಾಯಚೂರ, ಶ್ರೀನಿವಾಸ ರಾಯಚೂರ ಹಾಗೂ ನೂರಾರು ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net