ಸಿದ್ಧಾರೂಢ ಸ್ವಾಮೀಜಿಯವರ ಪಾದಪೂಜೆ ಮಾಡಿ ಗುರು ಪೂರ್ಣಿಮೆ ಆಚರಣೆ

3-RNR-05
Published on

ರಾಣೆಬೆನ್ನೂರ: ಮನುಷ್ಯ ಗುರುವಿನ ಮಾರ್ಗದರ್ಶನ ಪಡೆದು ಜ್ಞಾನಿಯಾಗಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕು ನಗರದ ಸಿದ್ಧಾರೂಢ ಮಠದ ಪೀಠಾಧಿಪತಿ ಮಲ್ಲಯ್ಯಜ್ಜ ಸ್ವಾಮೀಜಿ ಹೇಳಿದರು.
ಇಲ್ಲಿನ ಸಿದ್ಧಾರೂಢ ನಗರದ ಸಿದ್ಧಾರೂಢ ಮಠದಲ್ಲಿ ಸೋಮವಾರ ಗುರುಪೂರ್ಣಿಮೆ ನಿಮಿತ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಮನುಷ್ಯನ ಬೇಕು, ಬೇಡಗಳ ಬಗ್ಗೆ ಚಿಂತಿಸುವ ಗುರು ಆತನಿಗೆ ಜ್ಞಾನದ ಅರಿವನ್ನು ನೀಡುತ್ತಾನೆ. ನಾವಿರುವುದು ದಂಡಾಕಾರಣ್ಯದಲ್ಲಿ, ಇಲ್ಲಿ ಎಲ್ಲ ರೀತಿಯ ಪ್ರಾಣಿ-ಪಕ್ಷಗಳು, ವಿಷಜಂತುಗಳಿದ್ದು ಅವುಗಳನ್ನು ದಾಟಿಕೊಂಡು ಹೋಗಲು ಒದ್ದಾಡುತ್ತೇವೆ. ಗುರುವಿನ ಮಾರ್ಗದರ್ಶನವಿಲ್ಲದೆ ಮನೆಗೆ ಹೋಗದೆ ಮತ್ತೆ ಇಲ್ಲಿಯೇ ಉಳಿಯುತ್ತೇವೆ. ಎಲ್ಲ ಜ್ಞಾನ ಅರಿಯಲು ಇಲ್ಲಿಗೆ ಬಂದಿದ್ದೇವೆ. ಅದಕ್ಕೆ ಗುರುವಿನ ಮಾರ್ಗದರ್ಶನ ಬೇಕು ಎಂದರು.
ವಕೀಲ ಶಿವಪ್ಪ ಕುರವತ್ತಿ, ಶೈಲಜಾ ಬಣಕಾರ, ಚಂದ್ರು ಕರೇಗೌಡರ, ಕರಬಸಪ್ಪ ಹಳ್ಳಳ್ಳಿ, ದೇವೆಂದ್ರಪ್ಪ, ಪೂರ್ಣಿಮಾ ಅಯ್ಯನಗೌಡ್ರ, ಕುಮಾರ ಹಾಲಮಠ, ಪೂರ್ಣಿಮಾ ಕುರವತ್ತಿ, ಮನೋಹರ ಮಲ್ಲಾಡದ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net