ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು; ನಿರಂಜನಾನಂದಪುರಿ ಸ್ವಾಮೀಜಿ

27-RNR-03
Published on

ರಾಣೆಬೆನ್ನೂರ: ರಾಜ್ಯದಲ್ಲಿ ಕುರುಬ ಸಮುದಾಯ ಮಕ್ಕಳು ಉನ್ನತ ಹುದ್ದೆಯ ನೌಕರಿಯಲ್ಲಿ ಇರಬೇಕು. ಅದಕ್ಕಾಗಿ ಸಮುದಾಯದ ಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯಿದೆ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಮುಂದಾಗಬೇಕು ಎಂದು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ನಗರದ ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ತಾಲೂಕು ಕುರುಬ ನೌಕರರ ಸಂದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಬಂಧುಗಳು ಜಾತ್ರೆಗಳ ಹೆಸರಿನಲ್ಲಿ ದುಂದುವೆಚ್ಚ ಮಾಡದೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಬೇಕು. ನಮ್ಮ ಪೀಳಿಗೆ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ದಾರಿ ಮಾಡಿಕೊಡಲು ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಎಲ್ಲ ಸಮುದಾಯದವರ ಜತೆ ಹೊಂದಿಕೊಂಡು ಹೋಗಬೇಕು ಎಂದರು.

ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ಮುಟ್ಟಿಸುವ ಕಾರ್ಯ ಮಾಡುವುದು ಸರ್ಕಾರಿ ನೌಕರರು. ವಿದ್ಯಾಥಿರ್ಗಳಿಗೆ ಪೋತ್ಸಾಹ ಧನ ನೀಡಿ ಅವರನ್ನು ಪೋತ್ಸಾಹ ನೀಡುತ್ತಿರುವುದು ಶಾಘ್ಲನಿಯ. ಶಿಕ್ಷಣದಿಂದ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಸ್ವಾವಲಂಬಿಗಳಾಗಿ ಜೀವನದಲ್ಲಿ ಯಶಸ್ಸು ಸಾಧಿಸಲು ಕೇವಲ ಪಠ್ಯಗಳ ಅಧ್ಯಯನ ಮಾತ್ರ ಸಾಲದು. ಅದರ ಜತೆಗೆ ಕಂಪ್ಯೂಟರ್​ ಜ್ಞಾನ ಹಾಗೂ ಕೌಶಲ್ಯ ಕಲೆಗಳನ್ನು ಬೆಳೆಸಿಕೊಳ್ಳಬೇಕು ಎಂದರು.

ಮಕ್ಕಳ ತಜ್ಞ ಡಾ. ಪ್ರವಿಣ ಖನ್ನೂರ ಮಾತನಾಡಿ, ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಒಂದು ಉತ್ತಮ ಕಾರ್ಯ. ಸಮಾಜದ ಪ್ರತಿಯೊಬ್ಬರೂ ಇದಕ್ಕೆ ಆಥಿರ್ಕ ಶಕ್ತಿ ತುಂಬಬೇಕು. ಪ್ರತಿಭಾ ಪುರಸ್ಕಾರ ಪಡೆದವರು ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಬೇಕು. ಪಾಲಕರು ಮನೆಯಲ್ಲಿ ಮಕ್ಕಳಿಗೆ ಕಲಿಕೆಯ ವಾತಾವರಣ ನಿಮಿರ್ಸಬೇಕು ಎಂದರು.

ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಸುಭಾಸಚಂದ್ರ ಕುರುಬರ ಅಧ್ಯಕ್ಷತೆ ವಹಿಸಿದ್ದರು. ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸವಾಲುಗಳು ವಿಷಯ ಕುರಿತು ಲೇಖಕ- ಡಾ. ಗಂಗಾಧರ ಕೊಡ್ಲಿಯವರ ಉಪನ್ಯಾಸ ನೀಡಿದರು. ಎಸ್ಸೆಸ್ಸೆಲ್ಸಿ, ಪಿಯುಸಿ ಪರೀೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾಥಿರ್ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಇನ್​ಸೈಟ್​ ಐಎಎಸ್​ ಕೋಚಿಂಗ್​ ಸೆಂಟರ್​ನ ಸಂಸ್ಥಾಪಕ ನಿರ್ದೇಶಕ ವಿನಯಕುಮಾರ ಜಿ.ಬಿ., ಅಬಕಾರಿ ನಿರೀಕ್ಷಕ ಹನುಮಂತ ಪಟಾತ್​, ತಾಲೂಕ ಕುರುಬರ ಸಂಘದ ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಹನುಮಂತಪ್ಪ ಬಿ.ಎಸ್​., ಕೃಷಿ ವಿಜ್ಞಾನಿ ರಾಜು ನೆಳ್ಳೂರ, ಚೋಳಪ್ಪ ಕಸವಾಳ, ಹೆಸ್ಕಾಂ ಎಇಇ ಲಕ್ಷಣಪ್ಪ ಕೆ., ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಆರ್​.ಜಿ. ಮೇಟಿ, ಉಪ ತಹಸೀಲ್ದಾರ್​ ಕುವಲಶ್ಯಾಮ ಗೊರವರ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net