ರೇನ್ ಬೋ ಶಾಲೆಗೆ ಶೇ. 100ರಷ್ಟು ಫಲಿತಾಂಶ

je721538035802367-abc
Published on

ರಾಣೆಬೆನ್ನೂರ: ತಾಲೂಕಿನ ಕಮದೋಡ ಗ್ರಾಮದ ರೇನ್ ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯ (ಐಸಿಎಸ್‌ಇ) ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಶೇ. 100ರಷ್ಟಾಗಿದೆ.
ಪರೀಕ್ಷೆಗೆ ಹಾಜರಾದ 38 ವಿದ್ಯಾರ್ಥಿಗಳ ಪೈಕಿ 15 ಉನ್ನತ ಶ್ರೇಣಿ, 16 ಪ್ರಥಮ ಸ್ಥಾನ ಮತ್ತು 7 ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ. ಸಾಕ್ಷಿ ಎಸ್.ಸಿ. ಶೇ. 93ರಷ್ಟು ಅಂಕಗಳಿಸಿ ಶಾಲೆಗೆ ಪ್ರಥಮ, ಗೌತಮಿ ಪಿ.ಎಸ್. ಹಾಗೂ ಶಿಖಾ ವಿ.ಎಚ್. ಶೇ. 90.60ರಷ್ಟು ಅಂಕಗಳಿಸಿ ದ್ವಿತೀಯ, ಅನುಷಾ ಆನ್ವೇರಿ ಶೇ. 89.40ರಷ್ಟು ಅಂಕಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಸುರೇಶ ಸಿ.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net