

ರಾಣೆಬೆನ್ನೂರ: ನಗರದ ಗಂಗಾಪುರ ರಸ್ತೆಯ ರೈಲ್ವೆ ಗೇಟ್ (ಎಲ್ಸಿ&218)ಗೆ ಪರ್ಯಾಯವಾಗಿ ನಿಮಿರ್ಸಲು ಉದ್ದೇಶಿಸಿರುವ ಮೇಲ್ಸೇತುವೆಯ ಸ್ಥಳ ಬದಲಾಯಿಸಬೇಕು ಎಂದು ಒತ್ತಾಯಿಸಿ ಗಂಗಾಪುರ ರೈಲ್ವೆ ಗೇಟ್ ಮೇಲ್ಸೇತುವೆ ಬದಲಾವಣೆ ಹೋರಾಟ ಸಮಿತಿ ವತಿಯಿಂದ ಗುರುವಾರ ಹಾವೇರಿಯಲ್ಲಿ ಉಪ ವಿಭಾಗಾಧಿಕಾರಿ ಚನ್ನಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಉಪಾಧ್ಯಕ್ಷ ಮಲ್ಲಣ್ಣ ಅಂಗಡಿ ಮಾತನಾಡಿ, ಸದ್ಯ ರೈಲ್ವೆ ಇಲಾಖೆ ಅಧಿಕಾರಿಗಳು ಮೇಲ್ಸೇತುವೆ ನಿಮಿರ್ಸಲು ಗುರುತಿಸಿದ ಸ್ಥಳದಲ್ಲಿ ನೂರಾರು ಬಡವರ ಮನೆಗಳಿವೆ. ಅಲ್ಲದೆ ಈ ಗಂಗಾಪುರ ರಸ್ತೆ ಮಾರ್ಗವಾಗಿ ಸೇತುವೆ ನಿಮಿರ್ಸುವುದರಿಂದ ನಗರದ ಪ್ರಮುಖ ಮಾರುಕಟ್ಟೆ ಸ್ಥಳವಾದ ದೊಡ್ಡಪೇಟೆಯಲ್ಲೂ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಲಿದೆ.
ಆದ್ದರಿಂದ ಮೇಲ್ಸೇತುವೆಯನ್ನು ದೊಡ್ಡಪೇಟೆ ಮಾರ್ಗದ ಬದಲು ರಂಗನಾಥ ನಗರದ ಬಳಿಯಿರುವ ರೈಲ್ವೆ ಇಲಾಖೆಯ ಜಾಗದಲ್ಲಿಯೆ ನಿಮಿರ್ಸಬೇಕು. ಇದರಿಂದ ವಾಹನ ದಟ್ಟನೇ ನಿಯಂತ್ರಣವಾಗಲಿದೆ. ಜತೆಗೆ ಬಡ ಕುಟುಂಬಗಳ ಮನೆಗಳು ಉಳಿಯಲಿವೆ.
ಅಧಿಕಾರಿಗಳು ಸದ್ಯ ಗುರುತಿಸಿದ ಸ್ಥಳದಲ್ಲಿ ಸೇತುವೆ ನಿಮಿರ್ಸಿದರೆ, ಅಕ್ಕಪಕ್ಕದಲ್ಲಿ ವಾಸವಾಗಿರುವ ಕೂಲಿ ಕಾಮಿರ್ಕರ ನೂರಕ್ಕೂ ಅಧಿಕ ಮನೆಗಳನ್ನು ನೆಲಸಮ ಮಾಡಬೇಕಾಗುತ್ತದೆ. ಈ ರೀತಿ ಮಾಡಿದರೆ ಬಡ ಕುಟುಂಬದವರು ಎಲ್ಲಿಗೆ ಹೋಗಬೇಕು. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ರೈಲ್ವೆ ಇಲಾಖೆಯವರು ಸ್ಥಳ ಬದಲಾಯಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಮಿತಿಯ ಪ್ರಮುಖರಾದ ಕಪ್ಪತಪ್ಪ ಸಾಲಿಮನಿ, ಪ್ರಭುಸ್ವಾಮಿ ಕರ್ಜಗಿಮಠ, ಸಿದ್ದಪ್ಪ ಚಿಕ್ಕಬಿದರಿ, ಬಾಬಣ್ಣ ಕೊಪ್ಪದ, ಮಂಜುನಾಥ ಬೇತೂರ, ಗಣೇಶ ಸಾಲಿಮನಿ, ಅನಿಲಕುಮಾರ ಸಿದ್ದಾಳಿ, ಕುಮಾರೇಶ ಎಳೆಹೊಳಿ, ಕೋಟ್ರೇಶ ಕೆಂಚಪ್ಪನವರ ಮತ್ತಿತರರು ಉಪಸ್ಥಿತರಿದ್ದರು.