

ರಾಣೆಬೆನ್ನೂರ: ಇಲ್ಲಿಯ ರೈಲ್ವೆ ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಪ್ರಧಾನ ನಿರ್ವಾಹಕ ಮುಕುಲ್ ಮಥುರ್ ಭೇಟಿ ನೀಡಿ ಮೂಲಸೌಕರ್ಯ ಹೆಚ್ಚಿಸುವ, ರೈಲ್ವೆ ಹಳಿ, ಸುರಕ್ಷತಾ ಕ್ರಮಗಳ ಕುರಿತು ಪರಿಶೀಲಿಸಿದರು.
ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿಮಿರ್ಸಿದ ವಸತಿ ಗೃಹ ಉದ್ಘಾಟಿಸಿದರು. ಜತೆಗೆ ಐರನ್ ಓರ್ ಸರಕು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ರಾಣೆಬೆನ್ನೂರ&ಚಿಕ್ಕಜಾಜೂರ&-ಮೊಳಕಾಲ್ಮೂರು ವಿಭಾಗಗಳ ರೈಲು ಹಳಿ ನಡುವಿನ ಹಳಿ ಸ್ಥಿತಿ, ಸುರಕ್ಷತಾ ಅಂಶಗಳು ಮತ್ತು ವಿಭಾಗದ ಕಾರ್ಯಗಳನ್ನು ಪರಿಶೀಲಿಸಿದರು.
ಮುಖ್ಯ ಕಾರ್ಯನಿರ್ವಾಹಕ ಪ್ರಶಾಂತ ಕುಮಾರ, ಇಂಜಿನಿಯರ್ ಸಿ.ಎಂ. ಗುಪ್ತಾ, ವಿಭಾಗೀಯ ರೈಲು ನಿರ್ವಾಹಕ ಮುದಿತ್ ಮಿತ್ತ, ಮೈಸೂರು ವಿಭಾಗ ಮತ್ತು ಇತರ ಹಿರಿಯ ವಿಭಾಗೀಯ ಅಧಿಕಾರಿಗಳು ಉಪಸ್ಥಿತರಿದ್ದರು.