

ರಾಣೆಬೆನ್ನೂರ: ನಗರದ ನಿವಾಸಿ ಹರೀಶಕುಮಾರ ಮತ್ತು ಲಲಿತಾ ಒಡೇರಹಳ್ಳಿ ಅವರ ಪುತ್ರಿ ನೈರಾ ಎಚ್.ವಿ. ಇಂಡಿಯಾ ಬುಕ್ ಆಫ್ ರೇಕಾರ್ಡ್ ಅಚಿವರ ಅವಾರ್ಡ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಇವಳು 2.8 ವರ್ಷ ವಯಸ್ಸಿನಲ್ಲಿ ರಾಷ್ಟ್ರಗೀತೆ, ಗಣೇಶ ವಂದನ, ವಿವಿಧ ಬಣ್ಣಗಳು, ಹಣ್ಣುಗಳು, ಆಕಾರಗಳು, ವಾರದ ದಿನಗಳು, ಸೌರ ಗ್ರಹಗಳು ಮತ್ತು ಇಂಗ್ಲಿಷ್ ಅಕ್ಷರಗಳು, 17- ಹಾಡುಗಳು ಹಾಗೂ ಅಂಕಿಗಳು (1-20) ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದುಕೊಂಡು ಗಮನ ಸೆಳೆದಿದ್ದಾಳೆ.