

ರಾಣೆಬೆನ್ನೂರ: ನಗರ ವ್ಯಾಪ್ತಿಯ 250 ಕೆವಿ ವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಮಾ. 6ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಇಲ್ಲಿಯ ಸಂಗಂ ಸರ್ಕಲ್ ಹತ್ತಿರ, ರಂಗನಾಥ ನಗರ, ಓಂ ಸರ್ಕಲ್, ಕರಡೇರ ಓಣಿ, ಕುಂಬಾರ ಓಣಿ, ಬದನೆಕಾಯಿ ಓಣಿ, ರಮಾಳ್ದರ್ ಓಣಿ, ಬಸವನಗುಡಿ ಹಿಂಭಾಗ, ಬಸವೇಶ್ವರ ಹೋಟೆಲ್ ಹತ್ತಿರ, ದೊಡ್ಡಪೇಟೆ ಹತ್ತಿರ, ಕೋಟೆ, ಶಿವಾ ಕಾಲೇಜ್ ಹತ್ತಿರ, ಕುಲಕಣಿರ್ ಓಣಿ, ಯಾದಗಿರಿ ಓಣಿ, ಗಣೇಶ ನಗರ, ಎ.ಕೆ.ಜಿ ಕಾಲನಿ ಸೇರಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.