ಭಗವದ್ಗೀತೆ ಮಾನವ ಜೀವನಕ್ಕೆ ದಾರಿಯಾಗಿದೆ; ಶ್ರೀ ವಿಜಯತೀರ್ಥ ಶ್ರೀಪಾದಂಗಳವರು

1-RNR-06
Published on

ರಾಣೆಬೆನ್ನೂರ: ಭಗವದ್ಗೀತೆಯೂ ಆಧ್ಯಾತ್ಮಿಕ ಗ್ರಂಥವಾಗಿದ್ದು, ಶ್ರೀ ಕೃಷ್ಣ ಪರಮಾತ್ಮನು ಅರ್ಜುನನ್ನು ಉದ್ದೇಶಿಸಿ ಮಾಡಿದ ಪ್ರತಿಯೊಂದು ಉಪದೇಶ ಹಾಗೂ ತತ್ವ ಸಿದ್ದಾಂತಗಳನ್ನು ತಿಳಿಸುವ ಮೂಲಕ ಇಂದಿನ ಮಾನವ ಜೀವನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಕೂಡಲಿಯ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಆರ್ಯ ಅೋಭ್ಯತಿರ್ಥ ಮಠದ ರು ವಿಜಯತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಕೋಟೆಯ ವಿದ್ಯಾ-ದೀಶತೀರ್ಥರ ಹಾಗೂ ಶ್ರೀ ಸತ್ಯಾಭಿ ತೀರ್ಥರ ಮೂಲವೃಂದಾವನ ಸನ್ನಿಧಾನದಲ್ಲಿ ಬುಧವಾರ ಕೂಡಲಿಯ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಆರ್ಯ ಅೋಭ್ಯತಿರ್ಥ ಮಠದ ರು ವಿಜಯತೀರ್ಥ ಶ್ರೀಪಾದಂಗಳವರು 22ನೇ ಚಾರ್ತುಮಾಸ್ಯದ ನಿಮಿತ್ತ 1ನೇ ದಿನದ ಉಪನ್ಯಾಸ ಮಾಲಿಕೆಯಲ್ಲಿ ಭಗವದ್ಗೀತೆಯಲ್ಲಿ ಬರುವ ಭಗವಂತನ ಉಪದೇಶ ಕುರಿತು ಅವರು ವಿವರಿಸಿದರು.
ಭಗವದ್ಗೀತೆ ತನ್ನದೆಯಾದ ವಿಶೇಷ ಸ್ಥಾನಮಾನ ಹೊಂದಿದ್ದು, ಅನೇಕ ಪುರಾಣ ಪುಣ್ಯ ಕಥೆಗಳಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಶ್ರೀಗಳಿಗೆ ಅದ್ಧೂರಿ ಸ್ವಾಗತ…
ಚಾತುರ್ಮಾಸ್ಯದ ನಿಮಿತ್ತ ನಗರದಲ್ಲಿ ಮಂಗಳವಾರ ಸಂಜೆ ಆಗಮಿಸಿದ ಕೂಡಲಿಯ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಸಂಸ್ಥಾನ ಕೂಡಲಿ ಆರ್ಯ ಅೋಭ್ಯತಿರ್ಥ ಮಠದ ರು ವಿಜಯತೀರ್ಥ ಶ್ರೀಪಾದಂಗಳವರನ್ನು ಶೋಭಾಯಾತ್ರೆ ಮೂಲಕ ಮಠಕ್ಕೆ ಕರೆತರಲಾಯಿತು.
ನಗರದ ಅಶೋಕ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ಪೋಸ್ಟ್​ ವೃತ್ತ, ಎಂ.ಜಿ. ರಸ್ತೆ ಮಾರ್ಗವಾಗಿ ಕೋಟೆ ಪ್ರದೇಶದ ಶ್ರೀ ವಿದ್ಯಾಧಿಶ ಮತ್ತು ಶ್ರೀ ಸತ್ಯಾಭಿತೀರ್ಥ ಶ್ರೀಪಾದಂಗಳವರ ಮಠಕ್ಕೆ ಬಂದು ಸೇರಿತು.
ಮದ್ವ ಸಂದ ಅಧ್ಯ ಅನಂತ ಚಂದಿ, ರಂಗಣ್ಣ ದೇಶಪಾಂಡೆ, ಪಿ.ಕೆ. ಹಂಚಿನಮನಿ, ಮದ್ವಚಾರ್ಯ ಚಂದಿ, ವಾದಿರಾಜ ಗಲಗಲಿ, ಸಂಜೀವ ಶಿರಹಟ್ಟಿ, ಮಾಧವ ಸಾತೇನಹಳ್ಳಿ, ಗುರುರಾಜ ವರಾಹಮೂತಿರ್, ದೀರೇಂದ್ರ ಪಂಚಭಾವಿ, ಅನಿಲ ಅರಕೇರಿ, ಎನ್​.ಎಂ. ಶಿರಹಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net