

ರಾಣೆಬೆನ್ನೂರ: ವಿದ್ಯಾಥಿರ್ನಿಯರು ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದ ಇರಬೇಕಾದರೆ ಕ್ರೀಡಾಕೂಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ಕದರಮಂಡಲಗಿ ಹೇಳಿದರು.
ಸ್ಥಳಿಯ ಕೆಎಲ್ಇ ಸಂಸ್ಥೆಯ ರಾಜ&ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಬಿ.ಎಸ್. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಜಯಣ್ಣ ಜಂಬಗಿ, ಮಂಜಪ್ಪ ಸಣಬಸಪ್ಪನವರ, ಪ್ರಾಚಾರ್ಯ ನಾರಾಯಣ ನಾಯಕ, ವೀರಣ್ಣ ಸಿ.ಕೆ., ಕೃಷ್ಣ ಎಲ್.ಎಚ್., ಸಾಯಿಲತಾ ಮಡಿವಾಳರ, ಸಂಗೀತಾ ಕಾಯಕದ ಹಾಗೂ ಸಿಬ್ಬಂದಿ ಇದ್ದರು.