ದೇವಿಯ ಆರಾಧನೆ ಮಾಡಿ; ರೂಪೇಶ ಘಾಟಗೆ

8-RNR-03
Published on

ರಾಣೆಬೆನ್ನೂರ: ದುರ್ಗಾದೇವಿಯು ಮಹಿಷಾಸುರನನ್ನು ಕೊಂದು ರಾಕ್ಷಸ ಶಕ್ತಿಯನ್ನು ನಾಶಪಡಿಸಿದ್ದಕ್ಕೆ ದಸರಾ ಹಬ್ಬ ಆಚರಿಸಲಾಗುತ್ತದೆ ಎಂದು ಪ್ರಾಚಾರ್ಯ ರೂಪೇಶ ಘಾಟಗೆ ಹೇಳಿದರು.
ತಾಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದರ್​ ರ್ಲನ್​ ಸ್ಕೂಲ್​ನಲ್ಲಿ ಮಂಗಳವಾರ ಏರ್ಪಡಿಸಿದ್ದ ದಸರಾ ಹಬ್ಬದ ಆಚರಣೆಯಲ್ಲಿ ಅವರು ಮಾತನಾಡಿದರು.
ನವರಾತ್ರಿ ಪ್ರಯುಕ್ತ ದೇವಿಯ ಒಂಬತ್ತು ವಿವಿಧ ಅವತಾರಗಳನ್ನು ಆರಾಧಿಸಲಾಗುತ್ತದೆ. ಕೆಡುಕಿನ ವಿರುದ್ಧ ಒಳಿತಿನ ವಿಜಯವನ್ನು ನವರಾತ್ರಿ ಹಬ್ಬದ ಮೂಲಕ ಸ್ಮರಿಸುತ್ತೇವೆ. ಕರ್ನಾಟಕದ ಮೈಸೂರಿನಲ್ಲಿ ದಸರಾ ಹಬ್ಬವನ್ನು ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದರು.
ವಿದ್ಯಾಥಿರ್ಗಳು ಮಹಿಷಾಸುರ ರ್ಮದಿನಿ ಕಿರು ನಾಟಕ ಪ್ರಸ್ತುತ ಪಡಿಸಿದರು.
ಆಡಳಿತ ಮಂಡಳಿ ಕಾರ್ಯದಶಿರ್ ಪ್ರಶಾಂತ ಕಡಕೋಳ, ಸದಸ್ಯರಾದ ಕವಿತಾ ಕಡಕೋಳ, ರಾಜೇಶ್ವರಿ ಹನಗೋಡಿಮಠ ಹಾಗೂ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net