ಜ್ಞಾನದ ಅರಿವು ಮೂಡಿಸುವ ತಾಯಿಯೂ ಗುರು; ಶ್ರೀ ಸಿದ್ಧಲಿಂಗ ಸ್ವಾಮೀಜಿ

21-RNR-03
Published on

ರಾಣೆಬೆನ್ನೂರ: ಗುರುವಿನಲ್ಲಿ ಗುರುತ್ವಾಕರ್ಷಣ ಶಕ್ತಿಗಿಂತ ಮೀರಿದ ಶಕ್ತಿಯಿದೆ. ಮನುಷ್ಯನಿಗೆ ಸಂಸ್ಕಾರ, ಬದುಕಿನ ಹಾದಿ ತೋರಿಸಿದಾತ ಗುರು ಆಗುತ್ತಾನೆ. ಜ್ಞಾನದ ಅರಿವು ಮೂಡಿಸುವ ತಾಯಿ ಕೂಡ ಗುರುವಿನ ಸ್ಥಾನದಲ್ಲಿ ಮೊದಲಿರುತ್ತಾರೆ ಎಂದು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ ಹೇಳಿದರು.
ಇಲ್ಲಿನ ಮ್ಯತ್ಯುಂಜಯ ನಗರ ಚೆನ್ನೇಶ್ವರ ಮಠದ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಭಾನುವಾರ ಗುರುಪೂಣಿರ್ಮೆ ನಿಮಿತ್ತ ಏರ್ಪಡಿಸಿದ್ದ ಜನಜಾಗೃತಿ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಗುರುವಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ಶಿವ ತಿಳಿಸಿದ್ದಾನೆ. ಗುರುವಿನ ಮೇಲೆ ನಂಬಿಕೆ ಇದ್ದರೆ ಮಾತ್ರ ಆತನ ಒಲುಮೆ ದೊರೆಯುತ್ತದೆ. ದೇವರ ಆಶೀರ್ವಾದ ಪಡೆಯಲು ಗುರುವಿನ ಸಹಕಾರ ಇರಬೇಕು. ದೀೆ, ಸಂಸ್ಕಾರದ ಮೂಲಕ ಗುರು ಶಿಷ್ಯರಿಗೆ ದೇವರ ಅನುಗ್ರಹ ಮಾಡಿಸುತ್ತಾರೆ. ಆದ್ದರಿಂದ ಗುರುವಿನ ಮೊರೆ ಹೋಗಬೇಕು. ಜೀವನದ ಅರಿವನ್ನು ನೀಡುವ ಗುರು ಇಂದು ನಮಗೆ ಬೇಕಾಗಿದ್ದಾರೆ ಎಂದರು.
ಸಮಾರಂಭ ಉದ್ಘಾಟಿಸಿದ ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿ, ಗುರುವಿನ ಒಲುಮೆಯಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಗುರು ಸದಾ ಶಿಷ್ಯನ ಶ್ರೇಯಸ್ಸು ಬಯಸುತ್ತಾನೆ. ಗುರುವಿನ ಆಶೀರ್ವಾದದಿಂದ ಜಗತ್ತನ್ನೇ ಗೆಲ್ಲಬಹುದು. ಆಗಸದದಲ್ಲಿನ ಎಲ್ಲ ಮೋಡಗಳು ಮಳೆ ಸುರಿಸುವುದಿಲ್ಲ. ಕೆಲವು ಮೋಡಗಳು ಮಾತ್ರ ಮಳೆ ಸುರಿಸುತ್ತವೆ. ಅದೇ ರೀತಿ ಉಜ್ಜಯಿನಿ ಶ್ರೀಗಳು ಭಕ್ತರ ಇಷ್ಟಾರ್ಥ ಈಡೇರಿಸುತ್ತಾರೆ ಎಂದರು.
ಕಡೆನಂದಿಹಳ್ಳಿ ವೀರಭದ್ರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಭಕ್ತರಿಂದ ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿ ಕೇಂದ್ರ ಸ್ವಾಮೀಜಿ ಪಾದಪೂಜೆ ನಡೆಯಿತು.
ಪ್ರಮುಖರಾದ ಬಸವರಾಜ ಪಟ್ಟಣಶೆಟ್ಟಿ, ವಿ.ಪಿ. ಲಿಂಗನಗೌಡ್ರ, ಉಮೇಶ ಗುಂಡಗಟ್ಟಿ, ಗುರುರಾಜ ತಿಳವಳ್ಳಿ, ಜಯಶ್ರೀ ತಿಳವಳ್ಳಿ, ಅಮೃತಗೌಡ ಪಾಟೀಲ, ಎ್​.ಕೆ. ಭಸ್ಮಾಂಗಿಮಠ, ಕಸ್ತೂರಿ ಪಾಟೀಲ, ಸುನಂದಮ್ಮ ತಿಳವಳ್ಳಿ, ಮೃತ್ಯುಂಜಯ ಪಾಟೀಲ, ರವಿಕುಮಾರ ಪಾಟೀಲ, ಪ್ರಕಾಶ ಗಚ್ಚಿನಮಠ, ಕೊಟ್ರೇಶ ಅಂಗಡಿ, ಆನಂದಸ್ವಾಮಿ ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net