ದೇವರ ದಾಸಿಮಯ್ಯನವರ ಜಯಂತಿ ಆಚರಣೆ

3-RNR-04
Published on

ರಾಣೆಬೆನ್ನೂರ: ನೇಕಾರರ ಸಮಾಜದವರು ಎಲ್ಲ ಒಳಪಂಗಡಗಳನ್ನು ಒಗ್ಗೂಡಿಸಿ ಸಂಟಿತರಾಗಬೇಕು. ಅಂದಾಗ ಸಮಾಜದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಜಿಲ್ಲಾ ನೇಕಾರ ಒಕ್ಕೂಟದ ಗೌರವ ಅಧ್ಯಕ್ಷ ಡಾ. ಬಸವರಾಜ ಕೇಲಗಾರ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಏರ್ಪಡಿಸಿದ್ದ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಒಗ್ಗಟ್ಟಿನ ಕೊರತೆಯಿದ್ದರೆ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ರಾಜ್ಯದಲ್ಲಿ ನೇಕಾರ ಅಭಿವೃದ್ಧಿ ನಿಗಮ ಆಗಿದ್ದರೂ ಯಾರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡದೆ ತಟಸ್ಥವಾಗಿ ನಿಂತಿದೆ. ಆದ್ದರಿಂದ ಸಮಾಜದವರು ಎಲ್ಲರೂ ಒಂದಾಗಿ ಸರ್ಕಾರದಿಂದ ನಮಗೆ ದೊರೆಯಬೇಕಾದ ಸೌಲಭ್ಯಕ್ಕಾಗಿ ಹೋರಾಟ ಮಾಡುವ ಅವಶ್ಯಕತೆಯಿದೆ ಎಂದರು.

ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಅಧ್ಯಕ್ಷತೆ ವಹಿಸಿದ್ದರು. ದೇವರ ದಾಸಿಮಯ್ಯನವರ ಜೀವನ ಚರಿತ್ರೆ ಕುರಿತು ಉಪನ್ಯಾಸಕ ಮಾಲತೇಶ ಅಂಬಿಗೇರ ಉಪನ್ಯಾಸ ನೀಡಿದರು.

ಸಮಾಜದ ಪ್ರಮುಖರಾದ ಬಸವರಾಜ ಲೆ$್ಮಶ್ವರ, ದ್ಯಾಮಣ್ಣ ಸುಂಕಪುರ, ಹನುಮಂತಪ್ಪ ಮುಕ್ತೇನಹಳ್ಳಿ, ಅಶೋಕ ದುರ್ಗದಸೀಮಿ, ಅರವಿಂದ ಏಕಬೋಟೆ, ಗಿರಿಧರ ಗುಳೆದಗುಡ್ಡ, ವೀರಣ್ಣ ಕೋಳಿವಾಡ, ವಿನಾಯಕ ಚಿನ್ನಿಕಟ್ಟಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ಮಾರುತಿ ಗರಡಿಮನಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net