

ರಾಣೆಬೆನ್ನೂರ: ಪಾಲಕರೊಬ್ಬರು 9 ತಿಂಗಳ ಹೆಣ್ಣು ಮಗುವನ್ನು ಬಿಟ್ಟು ಹೋದ ಟನೆ ನಗರದ ಯರೇಕುಪ್ಪಿ ರಸ್ತೆಯಲ್ಲಿ ನಡೆದಿದೆ.
ಇಲ್ಲಿಯ ಮಾರುತಿ ನಗರದ ಶಂಕ್ರಪ್ಪ ಬಣಕಾರ ಎಂಬುವರ ಮನೆಯವರು ತಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಜು. 7ರಂದು ಯಾರೋ ಒಬ್ಬ ಅಜ್ಜಿ ಬಂದು ಹೆಣ್ಣು ಮಗು ಸಿಕ್ಕಿದೆ ಎಂದು ಹೇಳಿ ಕೊಟ್ಟು ಹೋಗಿದ್ದಾಳೆ. ಆದರೆ, ಈವರೆಗೂ ಮಗು ಕರೆದುಕೊಂಡು ಹೋಗಲು ಯಾರೂ ಬಂದಿಲ್ಲ ಎಂದು ಶಂಕ್ರಪ್ಪ ಬಣಕಾರ ದಂಪತಿ ಮಗುವನ್ನು ಮಕ್ಕಳ ರಕ್ಷಣಾಧಿಕಾರಿಗಳಿಗೆ ತಿಳಿಸಿದ್ದಾರೆ.
ಸದ್ಯ ಮಗುವನ್ನು ಸ್ಪಂದನಾ ವಿಶೇಷ ದತ್ತು ಕೇಂದ್ರಕ್ಕೆ ದಾಖಲು ಮಾಡಲಾಗಿದೆ. ಮಗುವಿನ ಜೈವಿಕ ಪಾಲಕರಿಗೆ ಮಾನವಿಯತೆಯ ಆಧಾರದ ಮೇಲೆ ಮತ್ತೊಮ್ಮೆ ಮಗುವನ್ನು ಮರಳಿ ಪಡೆಯಲು ಕೊನೆಯ ಅವಕಾಶ ಇರುವುದರಿಂದ ಮುಂದಿನ 60 ದಿನದೊಳಗೆ ಪಾಲಕರು ಬಂದು ಮಗು ತೆಗೆದುಕೊಂಡು ಹೋಗಬೇಕು. ಇಲ್ಲವಾದರೆ ಮಗುವಿನ ಮುಂದಿನ ಭವಿಷ್ಯದ ಹಿತದೃಷ್ಠಿಯಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ಪರಿತ್ಯಕ್ತ ಮಗುವೆಂದು ಎಂದು ಪರಿಗಣಿಸಿ ಕಾನೂನಿನ್ವಯ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.