ರೈತರ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಪ್ರತಿಭಟನೆ

oplus_0
oplus_0
Published on

ರಾಣೆಬೆನ್ನೂರ: ಮುಂಗಾರು ಮಳೆಯಿಂದ ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆವಿಮೆ ತುಂಬಿದ ರೈತರಿಗೆ ಬೆಳೆವಿಮೆ ಬಿಡುಗಡೆಗೊಳಿಸಬೇಕು. ರೈತರ ಸಂರ್ಪೂಣ ಸಾಲ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ನಗರದ ಬಸ್​ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ರೈತರು ಹಳೇ ಪಿ.ಬಿ. ರಸ್ತೆ ಮೂಲಕ ಬಸ್​ ನಿಲ್ದಾಣದ ಎದುರು ಆಗಮಿಸಿ ಮಾನವ ಸರಪಳಿ ನಿಮಿರ್ಸಿ ರಸ್ತೆ ಸಂಚಾರ ಬಂದ್​ ಮಾಡಿ ಪ್ರತಿಭಟಿಸಿದರು. ರೈತರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಕನಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. 1 ಹೆಕ್ಟೇರ್​ ಬೆಳೆಗೆ ಆಯಾ ಬೆಳೆಗೆ ಸಂಬಂಧಪಟ್ಟಂತೆ ಸೂಕ್ತ ಪರಿಹಾರ ಕೊಡಬೇಕು. ನದಿ ಪಾತ್ರದ ಗ್ರಾಮಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಬೇಕು. ರೈತರ ಸಂರ್ಪೂಣ ಸಾಲ ಮನ್ನಾ ಮಾಡಬೇಕು.

2024&-25ನೇ ಸಾಲಿನಲ್ಲಿ ಬೆಳೆ ಪರಿಹಾರ ನಷ್ಟ ಸರಿಪಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಯೂರಿಯಾ ಗೊಬ್ಬರವನ್ನು ಸಮರ್ಪಕವಾಗಿ ಪೂರೈಸಿ ಪ್ರತಿವರ್ಷವೂ ರೈತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಫಸಲ ಬೀಮಾ ಯೋಜನೆಯ ಹಣ ಕೆಲ ರೈತರ ಖಾತೆಗೆ ಜಮಾ ಆಗದೆ ಇರುವುದನ್ನು ಸರಿಪಡಿಸಬೇಕು. ರೈತರ ಹೊಲಗಳಿಗೆ ಸಂಪಕಿರ್ಸುವ ರಸ್ತೆಗಳನ್ನು ಸರಿಪಡಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರೈತರಾದ ಸಂತೋಷ ವೈ.ಪಿ., ಸಿದ್ದಲಿಂಗೇಶ, ಸಂತೋಷಕುಮಾರ, ಲಲಿತಾ ಲಮಾಣಿ, ಲಕ್ಷ$್ಮವ್ವ ಲಮಾಣಿ, ಪಾರವ್ವ ಲಮಾಣಿ, ಶೈಲಾ ಹರನಗಿರಿ, ಗಣೇಶ ಮೆಗಳಗೇರಿ, ಸುರೇಶಪ್ಪ ದುರುಗಪ್ಪನವರ, ನಂದಿತಾ ದುರುಗಪ್ಪನವರ, ನಂದಿತಾ ಡಿ., ಕೊಟ್ರಪ್ಪ ಕ್ಯಾರಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net