ರಾಣೆಬೆನ್ನೂರ ಅಭಿಮಾನಿಗಳಿಂದ ಪುನೀತ್ ರಾಜಕುಮಾರ ಪುಣ್ಯಸ್ಮರಣೆ

29-RNR-07
Published on

ರಾಣೆಬೆನ್ನೂರ: ಇಲ್ಲಿಯ ಡಾ. ಪುನೀತ್ ರಾಜಕುಮಾರ ಅಭಿಮಾನಿಗಳ ಬಳಗ ಹಾಗೂ ಕನ್ನಡ ಪರ ಸಂಘಟನೆಗಳ ವತಿಯಿಂದ ನಗರದ ಡಾ. ಪುನೀತ್ ರಾಜಕುಮಾರ ವೃತ್ತದಲ್ಲಿ ಭಾನುವಾರ ಡಾ. ಪುನೀತ್ ರಾಜಕುಮಾರ ಅವರ 2ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.
ಶಾಸಕ ಪ್ರಕಾಶ ಕೋಳಿವಾಡ ಪುನೀತ್ ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪ ಸಲ್ಲಿಸಿದರು. ನಂತರ ಮಾತನಾಡಿ, ಪುನೀತ್ ರಾಜಕುಮಾರ ಅವರು ನಮ್ಮನ್ನಗಲಿ ಎರಡು ವರ್ಷ ಕಳೆದವು. ಆದರೆ, ಅವರು ಇಂದಿಗೂ ಅಭಿಮಾನಿಗಳ ಹೃದಯದಲ್ಲಿ ಜೀವಂತರಾಗಿದ್ದಾರೆ. ನಗು ಮುಖದ ಅಪ್ಪು ಇಂದಿಗೂ ನಮ್ಮೆಲ್ಲರಿಗೂ ಸ್ಪೂರ್ತಿದಾಯಕರಾಗಿದ್ದಾರೆ ಎಂದರು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ಪ್ರಭಾವತಿ ತಿಳವಳ್ಳಿ, ನಿತ್ಯಾನಂದ ಕುಂದಾಪುರ, ಕಿರಣ ಗುಳೇದ, ಆನಂದ ಉಸ್ತಾದ, ಬ್ರಹ್ಮಾನಂದ ಉಜ್ಜೇರ, ಭಾಷಾ ಹಂಪಪಟ್ಟಣ, ದೇವರಾಜ ಕಲಾಲ, ನಿತ್ಯಾನಂದ ಕುಂದಾಪುರ ಹಾಗೂ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net