

ರಾಣೆಬೆನ್ನೂರ: ಎಂಥಹ ಕಾಲದಿಂದಲೂ ಯಾರ್ಯಾರೋ ಬಂದರೂ ಆರ್ಎಸ್ಎಸ್ಅನ್ನು ಬ್ಯಾನ್ ಮಾಡಲು ಆಗಿಲ್ಲ. ಇನ್ನೂ ಒಂದು ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗದ ಸಚಿವರಿಂದ ಆಗುತ್ತಾ ಎಂದು ಶಾಸಕ ಹಾಗೂ ಮಾಜಿ ಸಚಿವ ಸುರೇಶಕುಮಾರ ಪ್ರಶ್ನಿಸಿದರು.
ಇಲ್ಲಿಯ ಪರಿವರ್ತನ ರಾಣೆಬೆನ್ನೂರ ವತಿಯಿಂದ ನಗರದ ಆದಿಶಕ್ತಿ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ&50 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಮತ್ತೇ ಅಧಿಕಾರಕ್ಕೆ ಬಂದರೆ ಆರ್ಎಸ್ಎಸ್ಅನ್ನು ಬ್ಯಾನ್ ಮಾಡುತ್ತೇವೆ ಎಂದು ಹೇಳುವ ಸಚಿವರಿಗೆ ಈ ರೀತಿ ನಾನು ಪತ್ರ ಬರೆದು ಉತ್ತರ ಕೊಟ್ಟಿದ್ದೇನೆ ಎಂದು ತಿಳಿಸಿದರು.
ಇಂದಿರಾಗಾಂಧಿ ತಮ್ಮ ಖುಚಿರ್ ಉಳಿಸಿಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿ ಹೇರಿದರೆ ಹೊರತು ದೇಶದಲ್ಲಿ ಯಾವ ಸಮಸ್ಯೆಯೂ ಆಗ ಇರಲಿಲ್ಲ. ಆಗ ಗರೀಬಿ ಹಠಾವೋ ಎಂಬ ವ್ಯಾಖ್ಯ ಇಟ್ಟುಕೊಂಡು ಮಧ್ಯಂತರ ಚುನಾವಣೆ ಘೋಷಣೆ ಮಾಡಿದರು. ಆದರೆ, ಅವರಿಂದ ಯಾವ ಕಾಲಕ್ಕೂ ಗರೀಬಿ ಹಠಾವೋ ಆಗಲಿಲ್ಲ. ತುರ್ತು ಪರಿಸ್ಥಿತಿಯನ್ನು ಜನರು ಒಪ್ಪಲಿಲ್ಲ. ಅದನ್ನು ಚುನಾವಣೆಯಲ್ಲಿ ಇಂದಿರಾಗಾಂಧಿ ಅವರನ್ನು ಸೋಲಿಸುವ ಮೂಲಕ ಜನರು ಅವರಿಗೆ ಉತ್ತರ ನೀಡಿದ್ದರು.
ದೇಶದ ತುರ್ತು ಪರಿಸ್ಥಿತಿಯಲ್ಲಿ ಮೂರು ದಿನಗಳ ಕಾಲ ಪತ್ರಿಕೆಗಳು ಸಹ ಮುದ್ರಣವಾಗದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಯಿತು. ರಾಮಕೃಷ್ಣ ಹೆಗಡೆ, ಅದ್ವಾನಿ ಸೇರಿ ಅನೇಕರು ಜೈಲು ವಾಸ ಅನುಭವಿಸಿದರು. ದೇಶದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಇದನ್ನು ನೆನಪಿಸಿಕೊಳ್ಳಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಂವಿಧಾನ ಬದಲಾವಣೆ ತಂದಿದೆ. ದೇಶದ ಸಂವಿಧಾನ ಮೂಲಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಲಾಗಿದೆ. ನಾವು ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನ ಒಪು$್ಪತ್ತೇವೆ. ಕಾಂಗ್ರೆಸ್ನವರು ಇಂದಿರಾಗಾಂಧಿ ಸೂಚಿಸಿದ ಸಂವಿಧಾನ ಪಾಲಿಸುತ್ತಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಯ ಅಧಿಕಾರವನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ ಎನ್ನುವ ಅಧಿಕಾರ ಜಾರಿಗೆ ತಂದರು. ಸೋಮವಾರ ಬರುವ ನ್ಯಾಯದ ತೀರ್ಪನ್ನು ತಡೆಯಲು ಶನಿವಾರ ತಿದ್ದುಪಡಿ ಮಾಡಿದರು. ಸಂವಿಧಾನ ಶೇ. 60 ಭಾಗವನ್ನು ರಿರೈಟ್ ಮಾಡಿದರು. 21 ತಿಂಗಳಲ್ಲಿ 45 ಸುಗ್ರಿವಾಜ್ಞೆ ಕಾಯ್ದೆಗಳನ್ನು ತಂದರು. ಇದರ ಬಗ್ಗೆ ಮಾತನಾಡುವರನ್ನು ಒಳಗೆ ಹಾಕುವ ಕೆಲಸ ಮಾಡುತ್ತಿದ್ದರು. ಕಾನೂನು ತಿರುಚುವ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದರು. ಹೀಗಾಗಿ ಇದರ ಬಗ್ಗೆ ಜನರಿಗೆ ತಿಳಿಸಿ ಪ್ರಜಾಪ್ರಭುತ್ವದ ಉಳಿಸಬೇಕಿದೆ ಎಂದರು.
ಪ್ರಜ್ಞಾ ಪ್ರವಾಹ ಅಖಿಲ ಭಾರತ ಸಹಸಂಯೋಜಕ ರಘುನಂದನ, ತುರ್ತು ಪರಿಸ್ಥಿತಿಯಲ್ಲಿ ಜೈಲು ಶಿಕ್ಷೆಗೆ ಒಳಗಾದ ರಾಮಕೃಷ್ಣ ತಾಂಬೆ, ಉದ್ಯಮಿ ಕರಬಸಪ್ಪ ಜಾಡರ, ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಡಾ. ಬಸವರಾಜ ಕೇಲಗಾರ, ಡಾ. ಎಸ್.ಜಿ. ವೈದ್ಯ, ಕೆ.ಎನ್. ಪಾಟೀಲ, ಡಾ. ನಾರಾಯಣ ಪವಾರ ಮತ್ತಿತರರು ಉಪಸ್ಥಿತರಿದ್ದರು.