

ರಾಣೆಬೆನ್ನೂರ: ಕೆಎಲ್ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ಜನ್ಮದಿನದ ನಿಮಿತ್ತ ರಾಣೆಬೆನ್ನೂರ ಡಾ. ಪ್ರಭಾಕರ ಕೋರೆ ಕೋ&ಅಪ್ ಕ್ರೆಡಿಟ್ ಸೊಸೈಟಿ ವತಿಯಿಂದ ಸ್ನೇಹದೀಪ ಅಂಧ ಅಂಗವಿಕಲರ ಸಂಸ್ಥೆ ಮಕ್ಕಳಿಗೆ ಅನ್ನಸಂತರ್ಪಣೆ ಏರ್ಪಡಿಸುವ ಮೂಲಕ ಆಚರಿಸಲಾಯಿತು.
ಸ್ಥಾನಿಕ ಆಡಳಿತ ಮಂಡಳಿ ಚೇರ್ಮನ್ ವಿ.ಪಿ. ಲಿಂಗನಗೌಡ್ರ, ಉಮೇಶ ಗುಂಡಗಟ್ಟಿ, ಚಂದ್ರಶೇಖರ ತಿಳವಳ್ಳಿ, ಉಮಾಪತಿ ಹೊನ್ನಾಳಿ, ವೀರಣ್ಣ ಅಂಗಡಿ, ಜಿ.ಜಿ. ಹೊಟ್ಟಿಗೌಡ್ರ ಹಾಗೂ ಸಿಬ್ಬಂದಿ ಇದ್ದರು.