ರಾಣೆಬೆನ್ನೂರಿಗೆ ಉಪರಾಷ್ಟ್ರಪತಿ ಭೇಟಿ ಇಂದು

je721538035802367-abc
Published on

ರಾಣೆಬೆನ್ನೂರ: ನಗರದ ಕೆಎಲ್​ಇ ಸಂಸ್ಥೆಯ ರಾಜ& ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಫೆ. 7, 8 ಮತ್ತು 9ರಂದು ಮೂರು ದಿನಗಳ ಕಾಲ ನಡೆಯಲಿರುವ "ಕರ್ನಾಟಕ ವೈಭವ ವೈಚಾರಿಕ ಹಬ್ಬ' ಸಮಾರಂಭ ಉದ್ಘಾಟನೆ ನಿಮಿತ್ತ ಉಪರಾಷ್ಟ್ರಪತಿ ಜಗದೀಪ ಧನಕರ ೆ. 7ರಂದು ನಗರಕ್ಕೆ ಆಗಮಿಸಲಿದ್ದಾರೆ.

ನಗರದ ಆರ್​ಟಿಇಎಸ್​ ಕಾಲೇಜ್​ ಮೈದಾನದಲ್ಲಿ ನಿಮಿರ್ಸಿದ ಹೆಲಿಪ್ಯಾಡ್​ಗೆ ಆಗಮಿಸುವ ಅವರು ಅಲ್ಲಿಂದ ರಸ್ತೆ ಮೂಲಕ ರಾಜೇಶ್ವರಿ ಮಹಾವಿದ್ಯಾಲಯದ ವೇದಿಕೆ ಕಾರ್ಯಕ್ರಮಕ್ಕೆ ಬರುವರು. ಸಮಾರಂಭ ಉದ್ಘಾಟನೆ ನಂತರ ಹೆಲಿಕಾಪ್ಟರ್​ ಮೂಲಕ ದೆಹಲಿಗೆ ಪ್ರವಾಸ ಬೆಳಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net