ನಿರಂತರ ಮಳೆಗೆ 72 ಮನೆ ಹಾನಿ; 1100 ಹೆಕ್ಟೇರ್​ನಷ್ಟು ಕೃಷಿ, ತೋಟಗಾರಿಕೆ ಬೆಳೆ ಹಾನಿ

21-RNR-04
Published on

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಒಂದು ವಾರಗಳ ಕಾಲ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಕುಮುದ್ವತಿ ಹಾಗೂ ತುಂಗಭದ್ರಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಅಲ್ಲಲ್ಲಿ ಸೇತುವೆ ಮುಳಗಡೆಯಾಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.

ತಾಲೂಕಿನ ಲಿಂಗದಹಳ್ಳಿ&ರಾಣೆಬೆನ್ನೂರ ರಸ್ತೆಯ ಕುಮುದ್ವತಿಗೆ ನದಿಗೆ ಅಡ್ಡಲಾಗಿ ನಿಮಿರ್ಸಿದ ಸೇತುವೆ ಸಂರ್ಪೂಣ ಮುಳಗಿ ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಅದೇ ರೀತಿ ತುಮ್ಮಿನಕಟ್ಟಿ&ನಂದಿಗುಡಿ ಹಾಗೂ ಕುಪ್ಪೇಲೂರ ಬಳಿ ನದಿಗಳು ಮುಳಗಿ ಹೋಗಿದ್ದು ಸುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

ಅಪಾರ ಪ್ರಮಾಣದ ಹಾನಿ...

ನಿರಂತರ ಮಳೆ ಪರಿಣಾಮ ನಗರ ಸೇರಿ ತಾಲೂಕಿನ ಕುಪ್ಪೇಲೂರ, ತುಮ್ಮಿನಕಟ್ಟಿ, ಹಲಗೇರಿ ಸೇರಿ ವಿವಿಧ ಗ್ರಾಮಗಳಲ್ಲಿ ಒಂದು ವಾರದಲ್ಲಿ 72 ಮನೆಗಳು ಭಾಗಶಃ ಬಿದ್ದಿವೆ. 1100 ಹೆಕ್ಟೇರ್​ನಷ್ಟು ಕೃಷಿ ಹಾಗೂ ತೋಟಗಾರಿಕೆ ಬೆಳೆ ಹಾನಿಯಾಗಿದೆ. ತಾಲೂಕಿನ ಲಿಂಗದಹಳ್ಳಿ, ತುಮ್ಮಿನಕಟ್ಟಿ ಭಾಗದಲ್ಲಿ ಕುಮುದ್ವತಿ ನದಿ ನೀರು ಬಾಳೆ ತೋಟಗಳಿಗೆ ನುಗ್ಗಿದ್ದು ಬಾಳೆ ತೋಟಗಳು ಕೆರೆಗಳಂತಾಗಿವೆ.

ರೈತರಿಗೆ ಸಂಕಷ್ಟ...

ಈಗಾಗಲೇ ಮೆಕ್ಕೆಜೋಳ ಬೆಳೆ ಕಟಾವು ಮಾಡಿ ರಸ್ತೆ ಬದಿ ಒಣ ಹಾಕಿರುವ ರೈತರು ಮಳೆ ಬಂದಾಗ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಉಳ್ಳಾಗಡ್ಡಿ, ಬೆಳ್ಳುಳ್ಳಿ ಕಿತ್ತು ಒಣ ಹಾಕಿರುವ ರೈತರು ಮಳೆಯಿಂದ ಬೆಳೆ ಸಂರಸಿಕೊಳ್ಳಲು ನಾನಾ ಕಸರತ್ತು ನಡೆಸಿದ್ದಾರೆ. ನಿರಂತರ ಮಳೆ ರೈತರಿಗೆ ಭಾರಿ ಸಂಕಷ್ಟ ತಂದೊಡ್ಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net