

ರಾಣೆಬೆನ್ನೂರ: ಮರ್ಯಾದಾ ಪುರುಷೋತ್ತಮ ಶ್ರೀರಾಮ ಜಯಂತಿಯನ್ನು ಭಾನುವಾರ ನಗರದ ವಿವಿಧ ಕಡೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಇಲ್ಲಿನ ಸಂಗಮ ವೃತ್ತದ ಬಳಿಯಿರುವ ಮೆಹರವಾಡೆ ಕುಟುಂಬದ ಶ್ರೀರಾಮ ದೇವರ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ತೊಟ್ಟಿಲು ಕಟ್ಟಿ ಹೂವುಗಳಿಂದ ಅಲಂಕರಿಸಿ ಅದರಲ್ಲಿ ಶ್ರೀರಾಮನ ಪ್ರತಿಕವಾಗಿ ತೆಂಗಿನಕಾಯಿಯನ್ನು ಇಡಲಾಗಿತ್ತು. ಮಧ್ಯಾಹ್ನ 12ರ ಸಮಯದಲ್ಲಿ ಸುಮಂಗಲಿಯರು ತೊಟ್ಟಿಲು ತೂಗುವ ಮೂಲಕ ಹೆಸರಿಡುವ ಶಾಸ್ತ್ರ ಮಾಡಿ ಪಾಲಕಿ ಉತ್ಸವ ನಡೆಸಲಾಯಿತು.
ಇದಲ್ಲದೆ ಮಾರುತಿನಗರದ ಶ್ರೀರಾಮ ಮಂದಿರ, ಕೋಟೆ ಪ್ರದೇಶದ ರಾಮದೇವರ ಗುಡಿ, ತುಳಜಾ ಭವಾನಿ ದೇವಸ್ಥಾನ, ಅಶ್ವಥ ಮಾರುತಿ ದೇವಸ್ಥಾನ, ಕೆಇಬಿ ವಿನಾಯಕ ದೇವಸ್ಥಾನ, ವಿನಾಯಕನಗರದ ವಿನಾಯಕ ದೇವಸ್ಥಾನಗಳಲ್ಲಿಯೂ ಶ್ರೀರಾಮ ಜಯಂತಿಯನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಎಲ್ಲ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ಕೊಸಂಬರಿ, ಪಾನಕ, ಮಜ್ಜಗಿ ವಿತರಿಸಲಾಯಿತು.