ಶೋಷಿತರ ಧ್ವನಿಯಾಗಿದ್ದ ಬಾಬು ಜಗಜೀವನರಾಮ್​

8-RNR-03
Published on

ರಾಣೆಬೆನ್ನೂರ: ಡಾ. ಬಾಬು ಜಗಜೀವನರಾಮ್​ ಅವರು ತಮ್ಮ ಜೀವನದುದ್ದಕ್ಕೂ ಶೋಷಿತರ ಪರ ಗಟ್ಟಿ ಧ್ವನಿಯಾಗಿ ನಿಂತಿದ್ದರು ಎಂದು ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಹೇಳಿದರು.

ನಗರದ ಕೂನಬೇವು ರಸ್ತೆಯ ಬಾಬು ಜಗಜೀವನರಾಮ್​ ಸಭಾಭವನದಲ್ಲಿ ಮಂಗಳವಾರ ಸ್ಥಳಿಯ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ. ಬಾಬು ಜಗಜೀವನರಾಮ್​ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಮ್ಮ ಜೀವನದಲ್ಲಿ ಹಲವಾರು ಏಳುಬೀಳುಗಳನ್ನು ಎದುರಿಸಿದ ಜಗಜೀವನರಾಮ್​ ಅವರು ಊರಿನಿಂದ ಊರಿಗೆ ಅಲೆಯುತ್ತಾ ಜೀವನದಲ್ಲಿ ಉತ್ತಮ ಸಾಧನೆ ಮಾಡಿದರು. ಅವರು ಹೊಸ ಕೃಷಿ ನೀತಿ ಜಾರಿಗೆ ತರುವ ಮೂಲಕ ಹತ್ತು ವರ್ಷ ಆಹಾರ ಬೆಳೆಯದೆ ಹೋದರೂ ದೇಶಕ್ಕೆ ಸಾಕಾಗಷ್ಟು ಆಹಾರ ದಾಸ್ತಾನು ಇರುವಂತಹ ವ್ಯವಸ್ಥೆ ಮಾಡಿದರು. ಕಾಮಿರ್ಕರಿಗೆ, ಯೋಧರಿಗೆ, ಅನೇಕ ಸೌಲಭ್ಯ ತಂದರು ಎಂದರು.

ರೈತ ಮುಖಂಡ ಹನುಮಂತಪ್ಪ ಕಬ್ಬಾರ ಮಾತನಾಡಿ, ಮಹಾನ್​ ವ್ಯಕ್ತಿಗಳನ್ನು ನೆಣೆಯಬೇಕು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು. ಆದ್ದರಿಂದ ಎಲ್ಲರೂ ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ವ್ಯಕ್ತಿ ಮುಖ್ಯವಲ್ಲ ಅವರ ಮಾಡಿದ ಸಾಧನೆಯನ್ನು ಪರಿಗಣಿಸಬೇಕು ಎಂದರು.

ಶಹರ ಠಾಣೆ ಪಿಎಸ್​ಐ ಗಡ್ಡೇಪ್ಪ ಗುಂಜುಟಗಿ, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ಮಾಲತೇಶ ಬ್ಯಾಡಗಿ, ಮೈಲಪ್ಪ ದಾಸಪ್ಪನವರ, ಸಂಜೀವ ಮಸಿಯಪ್ಪನವರ, ಮಲ್ಲೇಶಪ್ಪ ಮದ್ಲೇರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net