

ರಾಣೆಬೆನ್ನೂರ: ನಗರದ 220ಕೆವಿ ವಿದ್ಯುತ್ ಕೇಂದ್ರದಿಂದ ಹೊರಡುವ 11 ಕೆವಿ ಎಫ್-3 ಫೀಡರ್ನಲ್ಲಿ ತುರ್ತು ಕಾಮಗಾರಿ ಇರುವುದರಿಂದ ಜ. 5ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಗೌರಿಶಂಕರ ನಗರ, ರಾಜೇಶ್ವರಿ ನಗರ, ಮೇಡ್ಲೇರಿ ರಸ್ತೆ, ಹುಣಸಿಕಟ್ಟಿ ರಸ್ತೆ, ಹೌಸಿಂಗ್ ಕಾಲನಿ, ವಾಗೀಶ ನಗರ, ಚೌಡೇಶ್ವರಿ ನಗರ, ಗ್ರಾಮೀಣ ಭಾಗವಾದ ಗಂಗಾಜಲ ತಾಂಡಾ, ಬಸಲಿಕಟ್ಟಿ ತಾಂಡಾ, ಸಿದ್ದಾಪುರ ತಾಂಡಾ, ಗೋವಿಂದ ಬಡಾವಣೆ ಸೇರಿ ಸುತ್ತಲಿನ ಪ್ರದೇಶಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.