ಅಂಜುಮನ್​ ಎ ಇಸ್ಲಾಂನಿಂದ ಮೌನ ಪ್ರತಿಭಟನೆ

2-RNR-07
Published on

ರಾಣೆಬೆನ್ನೂರ: ಪ್ರವಾದಿ ಹಜರತ್​ ಮಹ್ಮದ್​ ಪೈಂಗಂಬರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರದ ರಾಮಗಿರಿ ಮಹಾರಾಜ ಎಂಬ ವ್ಯಕ್ತಿಗೆ ಕಠಿಣ ಶಿೆ ವಿಧಿಸುವಂತೆ ಆಗ್ರಹಿಸಿ ಸ್ಥಳಿಯ ಅಂಜುಮನ್​ ಇ ಇಸ್ಲಾಂ ನೇತೃತ್ವದಲ್ಲಿ ಸೋಮವಾರ ನಗರದ ಮುಸ್ಲಿಂ ಬಾಂಧವರು ಮೌನ ಪ್ರತಿಭಟನೆ ಮೆರವಣಿಗೆ ನಡೆಸಿದರು.
ನಗರದ ಅಂಜುಮನ್​ ಉರ್ದು ಹೈಸ್ಕೂಲ್​ ಮೈದಾನದಿಂದ ಹೊರಟ ಪ್ರತಿಭಟನಾಕಾರರು ಮೇಡ್ಲೇರಿ ರಸ್ತೆ, ಡಾ. ಪುನೀತ್​ ರಾಜಕುಮಾರ ಸರ್ಕಲ್​, ಬಸ್​ನಿಲ್ದಾಣ ರಸ್ತೆ, ಕೋರ್ಟ್​ ಸರ್ಕಲ್​, ಹಳೇ ಪಿ.ಬಿ.ರಸ್ತೆ, ಹಲಗೇರಿ ಕ್ರಾಸ್​, ಕುರುಬಗೇರಿ ಕ್ರಾಸ್​ ಮಾರ್ಗವಾಗಿ ತಹಸೀಲ್ದಾರ್​ ಕಚೇರಿವರೆಗೆ ಮೌನ ಪ್ರತಿಭಟನೆ ನಡೆಸಿದರು.
ಒಂದು ಧರ್ಮ ಇನ್ನೊಂದು ಧರ್ಮವನ್ನು ನಿಂದಿಸುವುದಾಗಲಿ ಅಥವಾ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಯಾವ ಧರ್ಮವೂ ಬಯಸುವುದಿಲ್ಲ. ಆದರೆ, ಮಹಾರಾಷ್ಟ್ರ ರಾಜ್ಯ ನಾಸಿಕ್​ ಜಿಲ್ಲೆ ಮುಂಬ್ರಾ ಗ್ರಾಮದ ರಾಮಗಿರಿ ಮಹಾರಾಜ ಎಂಬ ವ್ಯಕ್ತಿಯು ನಮ್ಮ ಮುಸ್ಲಿಂ ಧರ್ಮದ ಪೈಗಂಬರ ಅವರನ್ನು ಅವರ ಸಂಪೂರ್ಣ ಹೆಸರು ಉಲ್ಲೇಖಿಸಿ ಇಲ್ಲಸಲ್ಲದ ಶಬ್ದಗಳನ್ನು ಬಳಸಿ ಬಹಿರಂಗವಾಗಿ ನಿಂದಿಸುವ ಮೂಲಕ ಸಮಸ್ತ ದೇಶದ ಮುಸ್ಲಿಂ ಧಮಿರ್ಯರ ಭಾವನೆಗಳಿಗೆ ನೋವುಂಟು ಮಾಡಿದ್ದಾನೆ.
ಆದ್ದರಿಂದ ರಾಷ್ಟ್ರಪತಿಯವರು ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ವಿಲರಾದಲ್ಲಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುವ ಲಣಗಳು ಗೋಚರಿಸುತ್ತವೆ. ಹೀಗಾಗಿ ತಪ್ಪಿತಸ್ಥರಿಗೆ ಶಿೆ ನೀಡಿ ದೇಶದಲ್ಲಿ ಶಾಂತಿ, ನೆಮ್ಮದಿಯ ವಾತಾವರಣ ನೆಲಸುವಂತೆ ಮಾಡಬೇಕು ಎಂದು ಆಗ್ರಹಿಸಿದರು. ಗ್ರೇಡ್​&2 ತಹಸೀಲ್ದಾರ್​ ಅರುಣ ಕಾರಗಿ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.
ಅಂಜುಮನ್​ ಸಂಸ್ಥೆ ಅಧ್ಯ ಏಜಾಜ್​ಖಾನ್​ ಸೌದಾಗರ, ಉಪಾಧ್ಯ ಇಮ್ರಾನ್​ಖಾನ್​ ಶಿರೇದ್​, ಕಾರ್ಯದಶಿರ್ ರಫಿಕ್​ ಮೆಣಸಿನಕಾಯಿ, ಪ್ರಮುಖರಾದ ರಿಯಾಜ್​ ಅಹ್ಮದ್​ ಕುಪ್ಪೆಲೂರ, ಜಬಿವುಲ್ಲಾ ದಾವಣಗೆರೆ, ಬಾಷಾಸಾಬ್​ ನೀಲಗಾರ, ಖ್ವಾಜಾಮೊಹಿದ್ದಿನ ಭಾವಿಕಟ್ಟಿ, ಅತಾವುಲ್ಲಾ ಉದಗಟ್ಟಿ, ಅಯಾಜ ಅಹ್ಮದ್​ ಖಾಜಿ, ಅಲ್ತಾ್​ಖಾನ್​ ಖಂದಾರಿ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net