ಪಶುಸಖಿಯರು ಉತ್ತಮ ಕೆಲಸ ಮಾಡಬೇಕು; ಡಾ. ಪರಮೇಶ ಹುಬ್ಬಳ್ಳಿ

3-RNR-05
Published on

ರಾಣೆಬೆನ್ನೂರ: ಪಶುಸಂಗೋಪನೆ ಚಟುವಟಿಕೆಯಲ್ಲಿ ಹೆಚ್ಚಿನ ರೈತರು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪಶುಸಖಿಯರು ಕೆಲಸ ಮಾಡಬೇಕು ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ಪರಮೇಶ ಹುಬ್ಬಳ್ಳಿ ಹೇಳಿದರು.
ನಗರದ ತಾಪಂ ಸಭಾಭವನದಲ್ಲಿ ಗುರುವಾರ ಜಿ.ಪಂ, ತಾ.ಪಂ ಹಾಗೂ ಪಶುವೈದ್ಯ ಇಲಾಖೆಯ ಆಶ್ರಯದಲ್ಲಿ ತಾಲೂಕಿನ 40 ಗ್ರಾಪಂಗಳ ಪಶುಸಖಿಯರಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪಶುಸಖಿಯರು ಇಲಾಖೆಯ ಜತೆಗೆ ಕೊಂಡಿಯಾಗಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದರು.
ತಾಪಂ ಇಒ ಸುಮಲತಾ ಎಸ್.ಪಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಎಚ್.ಸಿ. ಪಾಟೀಲ, ಡಾ. ಪವನ ಬೆಳಕೇರಿ, ಡಾ. ಪವನ ಬಿ.ಎಲ್. ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.
ಎನ್‌ಆರ್‌ಎಲ್‌ಎಂನ ವಲಯ ಮೇಲ್ವಿಚಾರಕ ಹನುಮಂತಪ್ಪ ಸಾರಥಿ ಕಾರ್ಯಕ್ರಮ ನಿರೂಪಿಸಿದರು. ತಾಪಂ ಟಿಪಿಎಂ ಅನಿಲಕಮಾರ ಸಿ.ಎಸ್., ಡಿ.ವಿ. ಅಂಗೂರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net