

ಮುಂಬೈ: ನಟ ರಣಬೀರ್ ಕಪೂರ್ ಅವರ ಕಾಲೆಳೆದ ರಶ್ಮಿಕಾ ಮಂದಣ್ಣ! ಆದರೆ... ಹೊರಗಲ್ಲ, ಸಿನಿಮಾದಲ್ಲಿ! ಇವರಿಬ್ಬರೂ ‘ಅನಿಮಲ್’ ಸಿನಿಮಾದಲ್ಲಿ ನಟಿಸುತ್ತಿದ್ದು, ಹೊಸ ಹಾಡು 'ಸತ್ರಂಗ...' ಇಂದು ಬಿಡುಗಡೆಯಾಗಿದೆ.
ರಶ್ಮಿಕಾ ಪಾದ ಮುಟ್ಟಿದ ರಣಬೀರ್
ರಣಬೀರ್ ರಶ್ಮಿಕಾ ಪಾದ ಮುಟ್ಟಿ ಹಾಡುವ ಹೊಸ ಹಾಡಿನಲ್ಲಿ ಪತಿ-ಪತ್ನಿಯರ ನಡುವಿನ ಜಗಳ, ಬಾಂಧವ್ಯ, ಪ್ರೀತಿಯನ್ನು ನಿರ್ದೇಶಕ ಸಂದೀಪ್ ರೆಡ್ಡಿ ವಂಗ ತೋರಿಸಿದ್ದಾರೆ.
ಹಾಡಿನಲ್ಲಿ ಕರ್ವಾ ಚೌತಾ ದಿನದಂದು ಹೆಂಡತಿ ತನ್ನ ಪತಿಗಾಗಿ ಕಾಯುತ್ತಿರುವುದನ್ನು ತೋರಿಸಲಾಗಿದೆ. ಆಗ ರಣಬೀರ್ ಕಪೂರ್ ಏನೋ ಹೇಳ್ತಾರೆ... ರಶ್ಮಿಕಾಗೆ ಸಿಟ್ಟು ಬರುತ್ತೆ.
ಅಂದಹಾಗೆ ಹಾಡಿನ ಒಂದು ದೃಶ್ಯದಲ್ಲಿ ರಣಬೀರ್ ಕಪೂರ್ ರಶ್ಮಿಕಾ ಕಾಲು ಹಿಡಿದಿರುವುದನ್ನು ನೋಡಬಹುದು. ಅಷ್ಟೇ ಅಲ್ಲ, ಚಿತ್ರದಲ್ಲಿ ಚುಂಬನ ದೃಶ್ಯ ಸಹ ತೋರಿಸಲಾಗಿದೆ.
ಇದು ಅನಿಮಲ್ ಚಿತ್ರದ ಎರಡನೇ ಹಾಡು. ಈ ಚಿತ್ರವನ್ನು ಸಂದೀಪ್ ವಂಗಾ ರೆಡ್ಡಿ ನಿರ್ದೇಶಿಸಿದ್ದಾರೆ. ರಶ್ಮಿಕಾ ಮೊದಲ ಬಾರಿಗೆ ರಣಬೀರ್ ಕಪೂರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಕರ್ವಾ ಚೌತ್ಗೆ ಮೊದಲು ಈ ಹಾಡನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ಏಕೆಂದರೆ ಕರ್ವಾ ಚೌತ್ ಉಪವಾಸವನ್ನು ನವೆಂಬರ್ 1 ರಂದು ಆಚರಿಸಲಾಗುತ್ತದೆ. ನವೆಂಬರ್ 1 ಕ್ಕೆ ಕೇವಲ 4 ದಿನಗಳ ಹಿಂದೆಯಷ್ಟೇ ಈ ಹಾಡು ಬಿಡುಗಡೆಯಾಗಿರುವುದನ್ನು ನಾವಿಲ್ಲಿ ಗಮನಿಸಬಹುದು.