ಕೂಲ್​ ಆಗಿರೋ Ranbir​ Kapoor ಸಡನ್​ ಆಗಿ ಸಿಟ್ಟಾಗಿದ್ದೇಕೆ; ಅಷ್ಟಕ್ಕೂ ನಡೆದಿದ್ದಾರೂ ಏನು

Ranbir Alia
Published on

ಮುಂಬೈ: ಬಾಲಿವುಡ್​ನ ದಿ ಮೋಸ್ಟ್​ ಕ್ಯೂಟೆಸ್ಟ್​ ಕಪಲ್​ ಆಲಿಯಾ ಭಟ್​ (Alia Bhatt) ಹಾಗೂ ರಣಬೀರ್​ ಕಪೂರ್​ (Ranbir Kapoor) ಎಲ್ಲರಿಗೂ ಅಚ್ಚುಮೆಚ್ಚು. 2022ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿಗೆ ರಾಹಾ ಹೆಸರಿನ ಮುದ್ದಾದ ಹೆಣ್ಣು ಮಗು ಇದ್ದು, ಮಗಳೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಆಗಿಂದಾಗೆ ಕಿಚ್ಚು ಹಚ್ಚುತ್ತಿರುತ್ತಾರೆ. ಆದರೆ, ಇದೀಗ ಈ ಜೋಡಿಯ ವಿರುದ್ಧ ಆರೋಪ ಒಂದು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ತಾಗಿ ಚರ್ಚೆಯಾಗುತ್ತಿದೆ.

ಅಕ್ಟೋಬರ್​ 25ರಂದು ಆಲಿಯಾ ಭಟ್​ (Alia Bhatt) ಅವರ ತಾಯಿ ಸೋನಿ ರಜ್ದಾನ್​ ಅವರು ಜನುಮದಿನ ಆಚರಿಸಿಕೊಂಡರು. ಇವರಿಗೆ ಶುಭಾಶಯ ಕೋರಲು ರಣಬೀರ್​ (Ranbir Kapoor) ಹಾಗೂ ಆಲಿಯಾ (Alia Bhatt) ಮುಂಬೈನ ಖಾಸಗಿ ಹೋಟೆಲ್​ ಒಂದಕ್ಕೆ ಬಂದಿದ್ದರು. ಈ ವೇಳೆ ಮಹೇಶ್​ ಭಟ್​ (Mahesh Bhatt) ಕೂಡ ಜತೆಗಿದ್ದರು. ರಣಬೀರ್​ ಮಹೇಶ್​ ಭಟ್​ ಅವರ ಜೊತೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಫೋಟೋಗೆ ಪೋಸ್ ಕೊಟ್ಟ ನಂತರ ಮಹೇಶ್ ಭಟ್​ ತಮ್ಮ ಕಾರಿನ ಕಡೆಗೆ ಹೋಗುತ್ತಾರೆ. ಅಷ್ಟರಲ್ಲಿ ರಣಬೀರ್ (Ranbir Kapoor) ಮತ್ತೆ ರೆಸ್ಟೋರೆಂಟ್ ಗೆ ಹೋಗುತ್ತಾರೆ. ಇದಾದ ನಂತರ ರಣಬೀರ್ (Ranbir Kapoor) ಮತ್ತು ಆಲಿಯಾ (Alia Bhatt) ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ. ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ (Alia Bhatt) ಇಬ್ಬರೂ ತಮ್ಮ ಕಾರಿನ ಕಡೆಗೆ ಹೋಗುತ್ತಿರುವಾಗ, ಪಾಪರಾಜಿಗಳು ಅವರನ್ನು ಸುತ್ತುವರೆದಿದ್ದಾರೆ. ಇದರಿಂದ ದಂಪತಿಗೆ ಕಸಿವಿಸಿಯಾಗಿದ್ದು, ರಣಬೀರ್​ (Ranbir Kapoor) ಪಾಪರಾಜಿಗಳ ವಿರುದ್ಧ ಕೂಗಾಡಿದ್ದು, ಅವರನ್ನು ತಳ್ಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಇತ್ತ ರಣಬೀರ್​ ಅವರ ಈ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಅನೇಕರು ದಂಪತಿಯನ್ನು ಬೆಂಬಲಿಸಿದ್ದಾರೆ. ಕೆಲವರು ದಂಪತಿಯ ನಡೆಯನ್ನು ಖಂಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚಾಸ್ಪದ ವಿಚಾರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net