ಜೀವ ಭಯದಿಂದ ಕ್ಯಾಬ್​ ಇಳಿದು ಓಡಿದೆ; ಭಯನಕ ಅನುಭವವನ್ನು ಹಂಚಿಕೊಂಡ ಮಹಿಳೆ | Woman Share her Experience

Untitled design - 2024-12-23T144339.299
Published on

ನವದೆಹಲಿ: ರಾಷ್ಟ್ರ ರಾಜಧಾನಿಯ ಮಹಿಳೆಯೊಬ್ಬರು ಹರಿಯಾಣದ ಗುರುಗ್ರಾಮ್‌ನಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ತಮಗೆ ಸಂಭವಿಸಿದ ಭಯಾನಕ ಘಟನೆಯ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ(Woman Share her Experience). ಮತ್ತು ಕಂಪನಿಯು ಹೊಣೆಗಾರಿಕೆಯ ಕೊರತೆಯನ್ನು ಆರೋಪಿಸಿದ್ದಾರೆ.

ಶಾಜಿಯಾ ಎ. ಹೆಸರಿನ ಮಹಿಳೆಯು, ಟೋಲ್ ದಾಟಿದ ನಂತರ ಚಾಲಕ ಕ್ಯಾಬ್ ಅನ್ನು ನಿಧಾನಗೊಳಿಸಿದ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ ಕ್ಯಾಬ್‌ನ ಮುಂದೆ ಇಬ್ಬರು ಜನರು ಬರುವುದನ್ನು ನೋಡಿದೆ. ಚಾಲಕನಿಗೆ ಎಡಭಾಗದಲ್ಲಿ ನಿಲ್ಲಿಸಲು ಸೂಚಿಸಿದರು. ಆಶ್ಚರ್ಯಕರ ಸಂಗತಿಯೆಂದರೆ ಚಾಲಕ ತನ್ನ ಕೋರಿಕೆಗೆ ಸಮ್ಮತಿಸಿ ಆಕೆಯ ಸೂಚನೆಯಂತೆ ಕಾರು ನಿಲ್ಲಿಸಿದ್ದಾನೆ ಎಂದು ಅವರು ಹೇಳಿದ್ದಾರೆ.

ಮಹಿಳೆ ಹೇಳುವಂತೆ ಚಾಲಕನನ್ನು ಕೇಳಿದಾಗ ಉತ್ತರ ಸಿಗಲಿಲ್ಲ. ಇನ್ನಿಬ್ಬರು ಕಾರಿಗೆ ಬಂದಾಗ ಪರಿಸ್ಥಿತಿ ಬಹಳ ಹದಗೆಟ್ಟಿತು. ಬಾಕಿ ಉಳಿದಿರುವ ಸಾಲದ ಕಂತಿನ ವಿಚಾರ ಎಂದು ಚಾಲಕ ತಿಳಿಸಿದೆ ಆಗ ಗಾಬರಿಗೊಂಡು ಆಕೆ ಕ್ಯಾಬ್​ನಿಂದ ಕೆಳಗಿಳಿದು ಓಡಿಹೋಗಿದ್ದಾಗೆ ತಿಳಿಸಿದ್ದಾರೆ. ಅಸುರಕ್ಷಿತ ಭಾವನೆಯಿಂದಾಗಿ ನಾನು ಬಲಭಾಗದಲ್ಲಿರುವ ಬಾಗಿಲು ತೆರೆದು ನನ್ನ ಪ್ರಾಣವನ್ನು ಉಳಿಸಿಕೊಳ್ಳಲು ಓಡಿದೆ. ಇದು ತುಂಬಾ ನೋವಿನ ಅನುಭವವಾಗಿತ್ತು ಮತ್ತು ನಾನು ಎಷ್ಟು ಹೆದರುತ್ತಿದ್ದೆ ಎಂದು ಯಾರಿಗಾದರೂ ಊಹಿಸಿಕೊಳ್ಳುವುದು ತುಂಬಾ ಕಷ್ಟ. ಮತ್ತೊಂದು ವಿಚಾರ ಎಂದರೆ ಆ ಪರಿಸ್ಥಿತಿಯಲ್ಲಿ ನಾನು ಓಲಾ ಅಪ್ಲಿಕೇಷನ್​​​ನಲ್ಲಿ ಎಸ್​ಒಎಸ್​​​(SOS) ಬಟನ್​​ ಅನ್ನು ಬಳಸಲು ಪ್ರಯತ್ನಿಸಿದಾಗಿ ಅದು ಕೆಲಸ ಮಾಡಲಿಲ್ಲಿ, ಇದು ಇನ್ನಷ್ಟು ಆತಂಕ ಪಡುವಂತೆ ಮಾಡಿತು ಎಂದು ಹೇಳಿದ್ದಾರೆ.

ಘಟನೆಯ ನಂತರ ಓಲಾ ಗ್ರಾಹಕ ಸೇವೆಗೆ ದೂರು ನೀಡಿದ್ದೇನೆ. ಆದರೆ ಈ 24 ಗಂಟೆಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಕಂಪನಿಯಿಂದ ನನಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಓಲಾ ಸಿಇಒ ಭವಿಶ್ ಅಗರ್ವಾಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಪ್ರಯಾಣಿಕರ ಸುರಕ್ಷತೆಗೆ ಎಂದಿಗೂ ಧಕ್ಕೆಯಾಗದಂತೆ ಕ್ರಮಕೈಗೊಳ್ಳಬೇಕು ಮಹಿಳೆ ಒತ್ತಾಯಿಸಿದ್ದಾರೆ. ಮತ್ತು ಓಲಾ ತಂಡದಿಂದ ಈ ಹೊಣೆಗಾರಿಕೆಯ ಕೊರತೆ ಆಘಾತಕಾರಿ ಮತ್ತು ಅತ್ಯಂತ ನಿರಾಶಾದಾಯಕವಾಗಿದೆ. ಪ್ರಯಾಣಿಕರ ಸುರಕ್ಷತೆಯು ಕೇವಲ ಅನುಕೂಲವಲ್ಲ, ಇದು ಮೂಲಭೂತ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net