ನಂಜನಗೂಡಿನಲ್ಲಿ ರಂಜಾನ್ ಸಡಗರ

11NGD1
Published on

ನಂಜನಗೂಡು: ನಗರದ ಈದ್ಗಾ ಮಸೀದಿಯಲ್ಲಿ ರಂಜಾನ್ ಅಂಗವಾಗಿ ಗುರುವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ, ಸುಭೀಕ್ಷವಾಗಿರಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು. ನೀಲಕಂಠನಗರ, ಸಿನಿಮಾ ರಸ್ತೆ ಹಾಗೂ ಚಾಮಲಾಪುರ ಬಡಾವಣೆಯಲ್ಲಿರುವ ಮಸೀದಿಗಳಲ್ಲೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ತಾಲೂಕಿನ ನಗರ್ಲೆ, ದೊಡ್ಡಕವಲಂದೆ ಸೇರಿದಂತೆ ಹಲವು ಮಸೀದಿಗಳಿಗೆ ಸ್ಥಳೀಯ ಮುಖಂಡರು ತೆರಳಿ ಶುಭ ಕೋರಿದರು.
ಮಾಜಿ ಶಾಸಕ ಕಳಲೆ ಎನ್.ಕೇಶವಮೂರ್ತಿ, ಕೆಪಿಸಿಸಿ ಸದಸ್ಯ ಅಕ್ಬರ್ ಅಲಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net