ಸ್ಟಾರ್​ ಹೀರೋಯಿನ್ ಆಗಬೇಕು ಅಂದರೆ ಅವರ ಹತ್ರ ಹೋಗಬೇಕು: ರಮ್ಯಾಕೃಷ್ಣ ಶಾಕಿಂಗ್​ ಹೇಳಿಕೆ ವೈರಲ್​!

ramyakrishna
Published on

ಹೈದರಾಬಾದ್​: ದಕ್ಷಿಣ ಚಲನಚಿತ್ರ ರಂಗದ ಟಾಪ್ ಹಿರೋಯಿನ್ ರಮ್ಯಾಕೃಷ್ಣ. ಚಿಕ್ಕವಯಸ್ಸಿನಲ್ಲೇ 90ರ ದಶಕದಲ್ಲಿ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟ ರಮ್ಯಾಕೃಷ್ಣ, ತನ್ನ ಅಭಿನಯ, ಮಾದಕ ನೋಟದಿಂದ ಅಪಾರ ಅಭಿಮಾನಿಗಳ ಹೃದಯ ಕದ್ದವರು. ಇಂದಿಗೂ ಅವಕಾಶಗಳನ್ನು ಪಡೆಯುತ್ತಾ, ಪ್ರತ್ಯೇಕ ಅಭಿಮಾನಿ ಬಳಗ ಸಂಪಾದಿಸಿಕೊಂಡಿರುವ ರಮ್ಯಾಕೃಷ್ಣ ನೀಡಿರುವ ಹೇಳಿಕೆ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಮ್ಯಾಕೃಷ್ಣ ಮಲಯಾಳಂ ಸಿನಿಮಾ ನೇರಂ ಪುರಲುಂಬೋರ್‌ ಸಿನಿಮಾ ಮೂಲಕ ಸಿನಿ ವೃತ್ತಿ ಪ್ರಾರಂಭಿಸಿದ್ದು, ವಿಷ್ಣುವರ್ಧನ್‌ ನಟನೆಯ ಕೃಷ್ಣ ರುಕ್ಮಿಣಿ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ನಟಿ, ಸಾಕಷ್ಟು ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನು ಕನ್ನಡದಲ್ಲಷ್ಟೇ ಅಲ್ಲದೆ, ತಮಿಳು, ತೆಲುಗು, ಮಲಯಾಳಂ ಅಲ್ಲದೆ ಬಾಲಿವುಡ್‌ನಲ್ಲಿಯೂ ಕೂಡ ರಮ್ಯಾಕೃಷ್ಣ ಹೆಸರು ಚಿರಪರಿಚಿತ. ಇನ್ನೂ 1998ರಲ್ಲಿ ತೆರೆಕೆಂಡ ಚಂದ್ರಲೇಖ ಎಂಬ ತೆಲುಗು ಚಿತ್ರದಲ್ಲಿ ನಟಿಸುವ ಹೊತ್ತಿಗೇ ರಮ್ಯಾ ಕೃಷ್ಣಾಗೆ ಆ ಚಿತ್ರದ ನಿರ್ದೇಶಕ ಕೃಷ್ಣ ವಂಶಿಯೊಂದಿಗೆ ಪ್ರೇಮಾಂಕುರವಾಗಿತ್ತು. ಆ ಪ್ರೀತಿ ಮತ್ತಷ್ಟು ಗಟ್ಟಿಯಾಗಿ 2003ರಲ್ಲಿ ಕೃಷ್ಣ ವಂಶಿಯನ್ನು ವಿವಾಹವಾದರು.

ಇಂಥ ರಮ್ಯಾ ಕೃಷ್ಣ ಹಿಂದೆ ಒಮ್ಮೆ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದ ಮಾತು ಈಗ ದೇಶದೆಲ್ಲೆಡೆ ಮತ್ತೊಮ್ಮೆ ಮಾರ್ದನಿಸುತ್ತಿದೆ. ಹೌದು.. ಕೆಲ ವರ್ಷಗಳ ಹಿಂದೆ, ಅನೇಕ ನಾಯಕಿಯರು ಚಿತ್ರರಂಗದಲ್ಲಿ ತಮಗಾದ ಕಹಿ ಅನುಭವ ಹಂಚಿಕೊಳ್ತಿದ್ದರು. ಅದೇ ಸಮಯದಲ್ಲಿ ಮಾತನಾಡಿದ್ದ ರಮ್ಯಾ ಕೃಷ್ಣ, ಕಾಸ್ಟಿಂಗ್ ಕೌಚ್ ಸಮಸ್ಯೆ ಇಂದು ನಿನ್ನೆಯದಲ್ಲ, ಈ ಸಮಸ್ಯೆ ಕೇವಲ ಚಿತ್ರರಂಗದಲ್ಲಿ ಅಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರದಲ್ಲಿಯೂ ಇದೆ ಎಂದು ಹೇಳಿದ್ದರು.

ಚಿತ್ರರಂಗದ ಸೆಲೆಬ್ರಿಟಿಗಳು ಹೆಚ್ಚಾಗಿ ಪರದೆಯ ಮೇಲೆ ಕಾಣಿಸಿಕೊಳ್ಳುವುದರಿಂದ ಬಹುತೇಕರಿಗೆ ಸಿನಿಮಾದವರ ವಿಚಾರದಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಇರುತ್ತದೆ. ಚಿತ್ರರಂಗದಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕ-ನಿರ್ಮಾಪಕರ ಅಥವಾ ಹೀರೋಗಳ ಜೊತೆ ಕೆಲವೊಮ್ಮೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತೆ. ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು. ಇಲ್ಲದೇ ಇದ್ದರೆ ಬಣ್ಣದ ಕನಸು ಕಮರಿ ಹೋಗುವ ಸಾಧ್ಯತೆ ಹೆಚ್ಚಿರುತ್ತೆ. ಈ ವಿಚಾರದಲ್ಲಿ ನಾನು ತುಂಬಾ ಲಕ್ಕಿ. ನನಗೆ ಎಂದೂ ಇಂತಹ ಹೊಂದಾಣಿಕೆ ಮಾಡಿಕೊಳ್ಳುವ ಪ್ರಮೇಯ ಬಂದಿಲ್ಲ ಎಂದು ರಮ್ಯಾ ಕೃಷ್ಣ ಹೇಳಿದ್ದರು.

ಹೆಚ್ಚು ಕಡಿಮೆ 7 ವರ್ಷದ ಹಿಂದೆ ರಮ್ಯಾ ಕೃಷ್ಣ ಹಂಚಿಕೊಂಡಿದ್ದ ಈ ಅಭಿಪ್ರಾಯದ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈಗ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದಾರೆ.

ರಮ್ಯಾ ಅವರ ಈ ಹೇಳಿಕೆಯನ್ನ ಅನೇಕರು ವಿರೋಧಿಸುತ್ತಿದ್ದಾರೆ. ಒಟ್ಟಿನಲ್ಲಿ ರಮ್ಯಾ ಕೃಷ್ಣ ಯಾವತ್ತೋ ಮಾತನಾಡಿದ್ದ ಮಾತು ಇವತ್ತು ಸಾಮಾಜಿಕ ಜಾಲತಾಣದಲ್ಲಿ ಚರ್ಚಿತ ವಿಷಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net