SM Krishna ಅವ್ರಂತ ಸುಂದರ ವ್ಯಕ್ತಿತ್ವ ಹೊಂದಿರುವ ಮತ್ತೊಬ್ಬ ವ್ಯಕ್ತಿ ಸಿಗಲಾರರು: ರಮ್ಯಾ ಭಾವುಕ

ramya (1)
Published on

ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ( Sm Krishna ) (92) ಇಂದು ವಿಧಿವಶರಾಗಿದ್ದಾರೆ.ಸ್ಯಾಂಡಲ್​ವುಡ್​​ ನಟಿ ರಮ್ಯಾ (Ramya) ಅವರು ಸದಾಶಿವನಗರ ಆಗಮಿಸಿ ಎಸ್‌ಎಂ ಕೃಷ್ಣ (SM Krishna) ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಇದೀಗ ಸೋಶಿಯಲ್​​ ಮೀಡಿಯಾದಲ್ಲಿ ಭಾವುಕ ಪೋಸ್ಟ್​​ವೊಂದನ್ನು ರಮ್ಯಾ ಹಾಕಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಕೃಷ್ಣ ಅವರು ನಿಧನ ಹೊಂದಿದ್ದಾರೆ. ಇಂದು (ಡಿಸೆಂಬರ್ 11) ಕೃಷ್ಣ ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಮಂಡ್ಯದ ಸೋಮನಹಳ್ಳಿಗೆ ಕೊಂಡೊಯ್ದಿದ್ದು ಅಲ್ಲಿಯೇ ಅಂತಿಮ ಸಂಸ್ಕಾರ ನಡೆಯಲಿದೆ.

ರಮ್ಯಾ ಪೋಸ್ಟ್​​ನಲ್ಲಿ ಏನಿದೆ?:

‘ಎಲ್ಲ ರೀತಿಯಿಂದಲೂ ಒಬ್ಬ ಅದ್ಭುತ ರಾಜನೀತಿಜ್ಞ ಆಗಿದ್ದರು, ಎಂದಿಗೂ ಅವರ ‘ರಾಜಕಾರಣಿ’ ರೀತಿ ವರ್ತಿಸಿದವರಲ್ಲ. ಎಂದಿಗೂ ಸಹ ಯಾರ ಬಗ್ಗೆಯೂ ಕೀಳಾಗಿ ಅವರು ಮಾತನಾಡಿದ್ದಿಲ್ಲ, ಅವರ ಎದುರಾಳಿಗಳಿಗೂ ಅದೇ ಗೌರವವನ್ನು ಅವರು ನೀಡುತ್ತಿದ್ದರು. ದೂರದೃಷ್ಟಿಯುಳ್ಳ, ಮಾನವೀಯತೆ ಹೊಂದಿದ್ದ ಸಿಹಿ ಮಾತುಗಳ ಕೃಷ್ಣ ಅವರು ಚೆನ್ನಾಗಿ ಓದಿಕೊಂಡಿದ್ದ, ಹಾಸ್ಯಪ್ರಜ್ಞೆ ಹೊಂದಿದ್ದ ವ್ಯಕ್ತಿ. ಅವರಂಥಹಾ ಸುಂದರ ವ್ಯಕ್ತಿತ್ವ ಹೊಂದಿರುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ನೀವು ನೀಡಿರುವ ಎಲ್ಲದಕ್ಕೂ ಧನ್ಯವಾದ. ನೀವು ಈಗ ನಿಮ್ಮ ಆತ್ಮೀಯ ಗೆಳೆಯನನ್ನು ಸೇರಿಕೊಂಡಿದ್ದೀರಿ’ ಎಂದಿದ್ದಾರೆ ರಮ್ಯಾ.

ರಮ್ಯಾ ಅವರ ಸಾಕು ತಂದೆ ಆರ್​ಟಿ ನಾರಾಯಣ್ ಅವರು ಎಸ್​ಎಂ ಕೃಷ್ಣ ಅವರ ಆತ್ಮೀಯ ಗೆಳೆಯರಾಗಿದ್ದರು. ಹಲವು ವರ್ಷಗಳಿಂದಲೂ ಕೃಷ್ಣ ಹಾಗೂ ನಾರಾಯಣ್ ಗೆಳೆಯರಾಗಿದ್ದರು ಹಲವು ವರ್ಷಗಳ ಕಾಲ ಇಬ್ಬರೂ ಒಟ್ಟಿಗೆ ಟೆನ್ನಿಸ್ ಆಡುತ್ತಿದ್ದರು. ಇದೇ ಕಾರಣಕ್ಕೆ ರಮ್ಯಾ, ಅವರು ‘ನೀವೀಗ ನಿಮ್ಮ ಆತ್ಮೀಯ ಗೆಳೆಯನೊಟ್ಟಿಗೆ ಇರಲಿದ್ದೀರಿ’ ಎಂದು ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net