ನನ್ನ ಮೊದಲ ಗೆಳೆಯ; ‘ಅಭಿ’ ಚಿತ್ರದ ನೆನಪುಗಳ ಬುತ್ತಿ ಬಿಚ್ಚಿಟ್ಟ ನಟಿ ರಮ್ಯಾ

Ramya Puneeth
Published on

ಬೆಂಗಳೂರು: ‘ಅಭಿ’, ಪುನೀತ್ ರಾಜಕುಮಾರ್ ಅಭಿನಯದ ಎರಡನೇ ಸಿನಿಮಾ. ಆ ಚಿತ್ರದ ಮೂಲಕ ನಟಿ ರಮ್ಯಾ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. 2003ರ ಏ. 25ರಂದು ಸಿನಿಮಾ ಬಿಡುಗಡೆಯಾಗಿತ್ತು. ‘ಅಪು್ಪ’ ಬಳಿಕ ಪುನೀತ್ ಗೆಲುವಿನ ಓಟ ಮುಂದುವರಿಸಿದರೆ, ರಮ್ಯಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದರು. ಇದೀಗ ‘ಅಭಿ’ ಚಿತ್ರ ಬಿಡುಗಡೆಯಾಗಿ ಮಂಗಳವಾರ (ಏ. 25) ಭರ್ತಿ 20 ವರ್ಷ. ಈ ಸಂದರ್ಭದಲ್ಲಿ ರಮ್ಯಾ ನೆನಪಿಗೆ ಜಾರಿದ್ದಾರೆ.

ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲಿ ‘ಸುಮ್ುಮ್ನೇ..’ ಹಾಡಿನ ಚಿತ್ರೀಕರಣ, ಚಿಕ್ಕಮಗಳೂರಿನಲ್ಲಿ ‘ಈ ನನ್ನ ಕಣ್ಣನೇ..’ ಹಾಡಿನ ಶೂಟಿಂಗ್, ‘ಅಭಿ’ ಚಿತ್ರದ ಪ್ರೀಮಿಯರ್ ಬಳಿಕ ರಮ್ಯಾ ತಂದೆ ಆಯೋಜಿಸಿದ್ದ ಕಾರ್ಯಕ್ರಮ ಹಾಗೂ ಚಿತ್ರದ ಶತದಿನೋತ್ಸವ ಸಂಭ್ರಮದಲ್ಲಿ ಡಾ. ರಾಜ್​ಕುಮಾರ್ ನೆನಪಿನ ಕಾಣಿಕೆ ನೀಡುತ್ತಿರುವ ಫೋಟೋಗಳನ್ನು ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ನನ್ನ ಮೊದಲ ಚಿತ್ರ, ಅಪು್ಪ ಅವರ ಜತೆಗಿನ ‘ಅಭಿ’ ಬಿಡುಗಡೆಯಾಗಿ ಇಂದಿಗೆ 20 ವರ್ಷಗಳು. ಇಲ್ಲಿಯವರೆಗೂ ಅಭಿಮಾನಿಗಳು ಹಾಗೂ ಹಿತೈಷಿಗಳ ಪ್ರೀತಿಗೆ ಕೃತಜ್ಞಳು. ನನಗೆ ಅವಕಾಶ ನೀಡಿದ ಡಾ. ರಾಜ್ ಕುಟುಂಬಕ್ಕೆ ಸದಾ ಚಿರಋಣಿ. ಮೊದಲ ದಿನದ ಚಿತ್ರೀಕರಣದ ವೇಳೆ ಒತ್ತಡಕ್ಕೊಳಗಾಗಿ ತುಂಬಾ ಅತ್ತಿದ್ದೆ. ಹಾಗೇ ಚಿತ್ರತಂಡದ ಜತೆ ಎಷ್ಟರ ಮಟ್ಟಿಗೆ ಹೊಂದಿಕೊಂಡಿದ್ದೆ ಎಂದರೆ ಕೊನೇ ದಿನ ಇನ್ನೂ ಹೆಚ್ಚು ಕಣ್ಣೀರು ಹಾಕಿದ್ದೆ. ಅಪು್ಪ ಎಂದಿಗೂ ನನ್ನ ಮೊದಲ ಸ್ನೇಹಿತ ಹಾಗೂ ಅಚ್ಚುಮೆಚ್ಚಿನ ಸಹನಟ’ ಎಂದು ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net