ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದನ್ನು ಅಲ್ಲಗಳೆದ ರಾಮಲಿಂಗಾರೆಡ್ಡಿ..!

Ramalinga Reddy
Published on

ಬೆಂಗಳೂರು: ‘ರಾಜಕೀಯದಲ್ಲಿ ಯಾರೂ ಶಾಶ್ವತವಲ್ಲ. ಮಸ್ಕಿ, ಹೊಸಕೋಟೆಯಲ್ಲಿ ಪಕ್ಷ ಬಿಟ್ಟು ಹೋದವರ ಜಾಗಕ್ಕೆ ಬೇರೆಯವರು ಬಂದಿದ್ದಾರೆ. ಒಬ್ಬರು ಖಾಲಿಯಾದರೆ ಆ ಸ್ಥಾನಕ್ಕೆ ಬೇರೆಯವರು ಬರುತ್ತಾರೆ. ಜೆಡಿಎಸ್‌ನಿಂದ ಸೋತವರು ಅರ್ಜಿ ಹಾಕಿದ್ದಾರೆ. ರಾಜಕೀಯ ನಿಂತ ನೀರಲ್ಲ, ಏನು ಬೇಕಾದರೂ ಸಾಧ್ಯವಾಗಬಹುದು’ ಎಂದು ಹೇಳುತ್ತಾ ಕೆಪಿಸಿಸಿ ಅಧ್ಯಕ್ಷ, ಡಿ.ಕೆ ಶಿವಕುಮಾರ್, ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಸೇರುವ ಬಗ್ಗೆ ಸುಳಿವು ನೀಡಿದ್ದರು.

ಆದರೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ರಾಮಲಿಂಗಾರೆಡ್ಡಿ ಟಾಂಗ್ ನೀಡಿದ್ದು ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲ್ಲ ಎಂದಿದ್ದಾರೆ. ಈ ಮೂಲಕ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದಾರೆ.

ಅವರು ತಮ್ಮ ಪಕ್ಷದಲ್ಲೇ ಟಿಕೆಟ್ ಗಾಗಿ ಅನೇಕರು ಪ್ರಯತ್ನ ಪಡುತ್ತಿದ್ದಾರೆ, ಇಲ್ಲೇ ರಷ್ ಇದೆ. ಹೊರಗಡೆಯಿಂದ ಬಂದ ಅಭ್ಯರ್ಥಿಗೆ ಟಿಕೆಟ್್ ಕೊಡೋದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಚುನಾವಣೆ ಹತ್ತಿರದಲ್ಲಿದ್ದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದನ್ನು ರಾಮಲಿಂಗಾರೆಡ್ಡಿ ಅಲ್ಲಗಳೆದಿರುವ ಘಟನೆ ಕುತೂಹಲಕಾರಿ ಆಗಿ ಮಾರ್ಪಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net