ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ; ಶಂಕಿತರ ಕಸ್ಟಡಿಗೆ ಅವಧಿ ವಿಸ್ತರಣೆ

ಮುಸ್ಸಾವೀರ್​ ಹುಸೇನ್ ಶಾಝೇಬ್​​ ಮತ್ತು ಅಬ್ದುಲ್​ ಮತೀನ್​ ತಹಾ
Published on

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಇಬ್ಬರು ಶಂಕಿತ ಉಗ್ರರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಕಸ್ಟಡಿ ಅವಧಿಯನ್ನು ಏ.29ರವರೆಗೂ ವಿಸ್ತರಿಸಿ ಕೋರ್ಟ್ ಆದೇಶಿಸಿದೆ.

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್ ತಾಹಾ (29) ಮತ್ತು ಮುಸ್ಸಾವಿರ್ ಹುಸೇನ್ ಶಝೀಬ್ (30)ರನ್ನು ಏ.12ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಬಂಧಿಸಿದ್ದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಏ.22ರವರೆಗೂ ಕಸ್ಟಡಿಗೆ ಪಡೆದಿತ್ತು. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಸೋಮವಾರ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ ಮತ್ತಷ್ಟು ವಿಚಾರಣೆ ಸಲುವಾಗಿ ಕಸ್ಟಡಿ ಅವಧಿ ವಿಸ್ತರಿಸಬೇಕೆಂದು ಮನವಿ ಸಲ್ಲಿಸಿದರು. ಇದಕ್ಕೆ ನ್ಯಾಯಾಲಯ ಸಮ್ಮತಿಸಿದೆ.

ಜಕ್ಕೂರು ಲೇಔಟ್ ನವ್ಯನಗರದ ಮತ್ತೊಬ್ಬ ಶಂಕಿತ ಮುಝಮೀಲ್ ಶರೀಷ್ (31) ಎಂಬಾತನ್ನು ಮಂಗಳವಾರಕ್ಕೆ ಕಸ್ಟಡಿ ಅವಧಿ ಮುಕ್ತಾಯವಾಗಲಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂದಿಯಾಗಿದ್ದ ಮುಝಮೀಲ್ ಶರ್ೀನನ್ನು ಹೆಚ್ಚಿನ ವಿಚಾರಣೆ ಸಲುವಾಗಿ ಏ.20ರಂದು ಕಸ್ಟಡಿಗೆ ಪಡೆದಿದ್ದರು.

ಕೋರಮಂಗಲದ ಎನ್‌ಐಎ ಪ್ರಾದೇಶಿಕ ಕಚೇರಿಯಲ್ಲಿ ಮೂವರು ಶಂಕಿತರನ್ನು ಮುಖಾಮುಖಿ ಕೂರಿಸಿ ತನಿಖಾಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದರ ಹಿಂದೆ ಇರುವ ಸ್ಥಳೀಯ ಮತ್ತು ವಿದೇಶಿ ಬಾಂಬರ್‌ಗಳು ಯಾರು ಇದ್ದಾರೆ. ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಕೆಫೆ ಸ್ಫೋಟದ ಹಿಂದೆ ಇರುವ ಶಂಕಿತರು ಯಾವ ಯಾವ ರಾಜ್ಯದಲ್ಲಿ ಯಾರ ಆಶ್ರಯದಲ್ಲಿ ಅಡಗಿದ್ದಾರೆ.

ಬಾಂಬರ್‌ಗಳಿಗೆ ಎಲ್ಲಿಂದ ಹಣ ಬರುತ್ತಿದೆ ಎಂಬ ಮಾಹಿತಿಯನ್ನು ಕೆದಕಿರುವ ಎನ್‌ಐಎ ಅಧಿಕಾರಿಗಳು, ವಿದೇಶಿ ಹ್ಯಾಂಡ್ಲರ್‌ಗಳೊಂದಿಗಿನ ಸಂಪರ್ಕ ಮತ್ತು ಅವರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕೆಫೆ ಸ್ಫೋಟಕ್ಕೆ ಬೇಕಾದ ಡಿಜಿಟಲ್ ಸಾಕ್ಷಾೃಧಾರ ಮತ್ತು ಘಟನ ಸ್ಥಳದಲ್ಲಿ ಸಿಕ್ಕ ಸಾಕ್ಷಾೃಧಾರಗಳ ಮೇಲೆ ಆರೋಪಪಟ್ಟಿಯನ್ನು ಸಿದ್ಧಪಡಿಸುವಲ್ಲಿ ಎನ್‌ಐಎ ಸಕ್ರಿಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net