ಡಿ.30ರಿಂದ ರಾಮೇಶ್ವರ ಜಾತ್ರೆ

rameshwara (1)
ಶ್ರೀರಾಮೇಶ್ವರ ದೇವರು.
Published on

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ರಾಮೇಶ್ವರ ದೇಗುಲದಲ್ಲಿ ಡಿ.30ರಿಂದ ಮೂರು ದಿನಗಳ ಕಾಲ ಎಳ್ಳಮಾವಾಸ್ಯೆ ಜಾತ್ರೆ ಜರುಗಲಿದೆ. ಯಶಸ್ಸಿಗೆ ಜಾತ್ರಾ ಸಮಿತಿಯಿಂದ ಪಟ್ಟಣದಲ್ಲಿ ಸಿದ್ಧತೆ ನಡೆದಿದೆ. 30ರಂದು ತುಂಗಾ ನದಿಯಲ್ಲಿರುವ ರಾಮಕೊಂಡದಲ್ಲಿ ತೀರ್ಥಸ್ನಾನ, 31ರಂದು ಶ್ರೀರಾಮೇಶ್ವರ ದೇವರ ರಥೋತ್ಸವ ಜರುಗಲಿದೆ. ಜ.1ರಂದು ಸಂಜೆ 6ಗಂಟೆಗೆ ತುಂಗಾನದಿಯಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನದೊಂದಿಗೆ ರಾಮೇಶ್ವರ ದೇವರ ಅದ್ದೂರಿ ತೆಪ್ಪೋತ್ಸವ ನೆರವೇರಲಿದೆ. ದೇವಸ್ಥಾನದ ಪ್ರಧಾನ ಅರ್ಚಕ ಎಸ್.ರಾಜಶೇಖರ ಭಟ್ಟ ಹಾಗೂ ವೇದಮೂರ್ತಿ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಜಾತ್ರೆಯ ಮೂರೂ ದಿನಗಳ ಕಾಲ ಮಿತ್ರ ವೃಂದದಿಂದ ಸಾರ್ವಜನಿಕ ಅನ್ನಸಂತರ್ಪಣೆ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net